Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ, ನಟ ಎಸ್. ನಾರಾಯಣ್ ಗೆ ಅವಮಾನವಾಗಿದೆಯಂತೆ! ಹಾಗಂತ ಅವರು ಆಕ್ರೋಶ ಹೊರಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.
ಓಲ್ಡ್ ಮಾಂಕ್ ಎಂಬ ಸಿನಿಮಾದಲ್ಲಿ ತಮಗೆ ಉತ್ತಮ ಪಾತ್ರವಿದೆ ಎಂದು ನಿರ್ದೇಶಕ ಶ್ರೀನಿ ಕರೆದರು. ಹಾಗಾಗಿ ನಾನು ಬಂದೆ. ಆದರೆ ಇಲ್ಲಿ ನನ್ನಂತಹ ಹಿರಿಯನಿಗೆ ಇದುವರೆಗೆ ಆಗದ ಅವಮಾನವಾಗಿದೆ ಎಂದು ನಾರಾಯಣ್ ಆಕ್ರೋಶ ವ್ಯಕ್ತಪಡಿಸುತ್ತಲೇ ವಿಡಿಯೋದಲ್ಲಿ ಆ ಸನ್ನಿವೇಶವನ್ನು ತೋರಿಸಿದ್ದಾರೆ.
ಆದರೆ ಇಷ್ಟು ಹೇಳಿದ ಮೇಲೆ ಇದೇನೋ ಗಂಭೀರ ವಿಚಾರವಿರಬೇಕು ಎಂದುಕೊಂಡಿದ್ದವರಿಗೆ ನಾರಾಯಣ್ ಚೆನ್ನಾಗಿಯೇ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಚಿತ್ರತಂಡದ ಉಳಿದೆಲ್ಲಾ ಸದಸ್ಯರು ತನ್ನನ್ನು ಬಿಟ್ಟು ಕೇಕ್ ಸವಿಯುತ್ತಿರುವ ದೃಶ್ಯವನ್ನು ತೋರಿಸಿ ಇದೇ ನೋಡಿ ನನ್ನನ್ನು ಬಿಟ್ಟು ಎಲ್ಲರೂ ಹೇಗೆ ಕೇಕ್ ಸವಿಯುತ್ತಾ ಇದ್ದಾರೆ ನೋಡಿ ಎಂದು ತಮಾಷೆ ಮಾಡಿದ್ದಾರೆ. ಅವರ ಈ ತಮಾಷೆಗೆ ಒಂದು ಕ್ಷಣ ವೀಕ್ಷಕರು ಬೇಸ್ತು ಬಿದ್ದಿದ್ದಾರೆ.