Publish Date: Wed, 17 Mar 2021 (09:22 IST)
Updated Date: Wed, 17 Mar 2021 (09:24 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ತೆರೆ ಕಂಡು ನಾಲ್ಕೇ ದಿನಕ್ಕೆ 50 ಕೋಟಿ ಗಳಿಕೆ ಮಾಡಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ.
ಇದರ ಬೆನ್ನಲ್ಲೇ ರಾಬರ್ಟ್ ಎರಡನೇ ಭಾಗದ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ರಾಬರ್ಟ್ ಸಿನಿಮಾ ಎರಡನೇ ಭಾಗ ಬರಲಿದೆಯೇ ಎಂಬ ಪ್ರಶ್ನೆಗೆ ನಿರ್ದೇಶಕ ತರುಣ್ ಸುಧೀರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಸ್ಕ್ರಿಪ್ಟ್ ಮಾಡುವಾಗ ನನಗೆ ಎರಡನೇ ಭಾಗ ಮಾಡುವ ಯೋಚನೆಯಿರಲಿಲ್ಲ. ಸದ್ಯಕ್ಕಂತೂ ಎರಡನೇ ಭಾಗದ ಯೋಚನೆಯಿಲ್ಲ. ಆದರೆ ಭವಿಷ್ಯದಲ್ಲಿ ಇದು ಆಗಬಹುದೋ ಎಂದು ಇನ್ನೂ ಯೋಚನೆ ಮಾಡಿಲ್ಲ. ಈ ಬಗ್ಗೆ ನಿರ್ಮಾಪಕ ಉಮಾಪತಿ ಗೌಡ ಮತ್ತು ದರ್ಶನ್ ಜೊತೆಗೆ ಚರ್ಚೆ ಮಾಡಬೇಕು ಎಂದಿದ್ದಾರೆ.