ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ತಮಗೆ ಮೊದಲು ಅವಕಾಶ ಕೊಟ್ಟ ರಿಷಬ್ ಶೆಟ್ಟಿ ಮತ್ತು ಅವರ ಬ್ಯಾನರ್ ಹೆಸರು ಹೇಳದೇ ಇತ್ತೀಚೆಗೆ ಟ್ರೋಲ್ ಗೆ ಗುರಿಯಾಗಿದ್ದರು.
ಇದೀಗ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ರಶ್ಮಿಕಾ ಮಾಧ್ಯಮಗಳ ಮುಂದೆ ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ನಾನು ಕಾಂತಾರ ವೀಕ್ಷಿಸಿದ್ದೇನೆ ಎಂದಿದ್ದಾರೆ.
ನನಗೆ ಕಾಂತಾರ ನೋಡಿದ್ದೀರಾ? ಎಂದು ಕೇಳಿದಾಗ ನಾನು ಸಿನಿಮಾ ನೋಡಿರಲಿಲ್ಲ.ಹಾಗಾಗಿ ಅದರ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಈಗ ಸಿನಿಮಾ ನೋಡಿದ್ದೇನೆ ಮತ್ತು ಸಿನಿಮಾ ಚೆನ್ನಾಗಿದೆ ಎಂದು ತಂಡದವರಿಗೂ ಮೆಸೇಜ್ ಮಾಡಿದ್ದೆ. ಅವರೂ ಥ್ಯಾಂಕ್ಯೂ ಎಂದು ಪ್ರತಿಕ್ರಿಯಿಸಿದ್ದಾರೆ. ನಮ್ಮ ಒಳಗೆ ಏನೆಲ್ಲಾ ಮಾತುಕತೆ ಆಗಿದೆ ಎನ್ನುವುದು ಹೊರಗಿನವರಿಗೆ ಗೊತ್ತಿಲ್ಲ. ಹೀಗಾಗಿ ಅಂತಹವರು ಮಾತನಾಡುತ್ತಿದ್ದಾರೆ. ನನಗೆ ಇದುವರೆಗೆ ಕನ್ನಡ ಸಿನಿಮಾದಿಂದ ಬ್ಯಾನ್ ಮಾಡುವ ಬಗ್ಗೆ ಯಾರೂ ಹೇಳಿಲ್ಲ. ಹೀಗಾಗಿ ಅದರ ಬಗ್ಗೆ ಯೋಚನೆಯಿಲ್ಲ ಎಂದಿದ್ದಾರೆ.