ಬೆಂಗಳೂರು: ಡಾಲಿ ಧನಂಜಯ್ ತಮ್ಮ ನಿರ್ಮಾಣದ ಹೊಸ ಸಿನಿಮಾದಲ್ಲಿ ನೆನೆಪಿರಲಿ ಪ್ರೇಮ್ ಪುತ್ರಿಗೆ ಅವಕಾಶ ನೀಡಿದ್ದಕ್ಕೆ ಟೀಕೆಗೆ ಗುರಿಯಾಗಿದ್ದಾರೆ.
ಡಾಲಿ ಧನಂಜಯ್ ಮತ್ತೊಬ್ಬ ಸ್ಟಾರ್ ನಟನ ಪುತ್ರಿ ಅಮೃತಾರನ್ನು ಟಗರು ಪಲ್ಯ ಸಿನಿಮಾಗೆ ನಾಯಕಿಯಾಗಿ ಮಾಡಿದ್ದಾರೆ. ಈ ಮೂಲಕ ನೆಪೊಟಿಸಂ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕೆಲವರು ಟೀಕಿಸಿದ್ದಾರೆ. ಈ ಮೊದಲು ಹೆಡ್ ಬುಷ್ ಸಿನಿಮಾ ವಿವಾದವಾದಾಗ ಧನಂಜಯ್ ಬಡವರ ಮಕ್ಕಳು ಬೆಳೀಬೇಕು ಕಣ‍್ರಯ್ಯ ಎಂದಿದ್ದರು.
ಅದನ್ನೇ ಮುಂದಿಟ್ಟುಕೊಂಡು ಈಗ ಕೆಲವರು ಬಡವರ ಮಕ್ಕಳಿಗೆ ಅವಕಾಶ ಕೊಡಬೇಕು. ಅದು ಬಿಟ್ಟು ಸ್ಟಾರ್ ನಟನ ಪುತ್ರಿಗೆ ಅವಕಾಶ ಯಾಕೆ ಕೊಟ್ಟಿರಿ ಎಂದು ಟೀಕಿಸಿದ್ದಾರೆ. ಇನ್ನು ತಮ್ಮ ವಿರುದ್ಧ ಟೀಕೆ ಬರುತ್ತಿರುವ ಬೆನ್ನಲ್ಲೇ ಡಾಲಿ ಧನಂಜಯ್ ಪ್ರತಿಕ್ರಿಯಿಸಿದ್ದು, ಈ ಸಿನಿಮಾದ ನಿರ್ದೇಶಕ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದವನು ಕಣೋ ಎಂದಿದ್ದಾರೆ.