Publish Date: Mon, 18 Oct 2021 (09:45 IST)
Updated Date: Mon, 18 Oct 2021 (10:07 IST)
ಹೈದರಾಬಾದ್: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದು ಹೊಸದೇನಲ್ಲ. ಬಹುಶಃ ಅತೀ ಹೆಚ್ಚು ಟ್ರೋಲ್ ಆಗುವ ನಟಿ ಎಂಬ ಬಿರುದು ರಶ್ಮಿಕಾಗೇ ಸಲ್ಲಬೇಕೇನೋ. ಆದರೆ ಇದೀಗ ಟ್ರೋಲಿಗನೊಬ್ಬನಿಗೆ ರಶ್ಮಿಕಾ ನೀಡಿದ ಉತ್ತರ ಎಲ್ಲರ ಗಮನ ಸೆಳೆದಿದೆ.
ರಶ್ಮಿಕಾ ಮೊನ್ನೆಯಷ್ಟೇ ತಮ್ಮ ಟ್ವಿಟರ್ ಪುಟದಲ್ಲಿ ರಾಮ್ ಚರಣ್ ತೇಜ್ ಜೊತೆಗಿನ ತಮ್ಮ ಮುಂಬರುವ ಸಿನಿಮಾದ ಫೋಟೋವೊಂದನ್ನು ಪ್ರಕಟಿಸಿದ್ದರು. ಇದನ್ನು ನೋಡಿದ ನೆಟ್ಟಿಗನೊಬ್ಬ ನಿಮ್ಮನ್ನೇ ಯಾಕೆ ಎಲ್ಲಾ ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಆಯ್ಕೆ ಮಾಡುತ್ತಾರೆ? ಎಂದು ಕಾಲೆಳೆಯುವ ಪ್ರಯತ್ನ ಮಾಡಿದ್ದಾನೆ.
ಇದಕ್ಕೆ ರಶ್ಮಿಕಾ ಅಚ್ಚರಿಯೆಂಬಂತೆ ಪ್ರತಿಕ್ರಿಯಿಸಿದ್ದು, ಯಾಕೆಂದರೆ ನನ್ನ ನಟನೆ ನೋಡಿ ಎಂದು ಸ್ಮೈಲ್ ಇಮೋಜಿ ಜೊತೆಗೆ ತಿರುಗೇಟು ನೀಡಿದ್ದಾರೆ.