Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಬಹುತಾರಾಗಣದ ಜೈಲರ್ ಸಿನಿಮಾ ಇಂದು ಬಿಡುಗಡೆಯಾಗಿದೆ. ಥಿಯೇಟರ್ ನ ಮುಂದೆ ಮಧ್ಯರಾತ್ರಿಯಿಂದಲೇ ಜನಸಾಗರ ಹರಿದುಬಂದಿದೆ.
ಜೈಲರ್ ಸಿನಿಮಾದ ಮೊದಲ ಶೋ ನೋಡಿದ ಪ್ರೇಕ್ಷಕರು ಸೂಪರ್ ಆಗಿದೆ ಎಂದು ಹೇಳಿದ್ದಾರೆ. ಮೊದಲಾರ್ಧದಲ್ಲಿ ತಲೈವರ್ ಎಂಟ್ರಿಯೇ ಅದ್ಭುತವಾಗಿದೆ. ಅದಕ್ಕೆ ತಕ್ಕ ಹಿನ್ನಲೆ ಸಂಗೀತವಿದೆ. ಇಂಟರ್ ವೆಲ್ ನಲ್ಲಿ ಮುಂದೇನು ಎಂಬ ಕುತೂಹಲ ಕಾಯ್ದಿರಿಸುತ್ತದೆ.
ಇನ್ನು ತಮ್ಮ ಮೆಚ್ಚಿನ ನಟ ರಜನಿ ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಜೊತೆಗೆ ಮೊದಲ ಶೋ ನೋಡಲು ಅಭಿಮಾನಿಗಳು ನೂಕುನುಗ್ಗಲು ನಡೆಸಿದ್ದಾರೆ. ಇದೀಗ ಮೊದಲ ದಿನ ಎಷ್ಟು ಕೋಟಿ ಬಾಚಿಕೊಳ್ಳುತ್ತದೆ ನೋಡಬೇಕಿದೆ.