Publish Date: Sat, 23 Dec 2017 (11:29 IST)
Updated Date: Sat, 23 Dec 2017 (11:32 IST)
ಬೆಂಗಳೂರು: ಮದುವೆ ಮುಗಿಸಿ ಬರೋಬ್ಬರಿ ಒಂದು ವರ್ಷ ಮುಗಿದ ಮೇಲೆ ರಾಧಿಕಾ ಪಂಡಿತ್ ಮರಳಿ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ರಾಧಿಕಾ ಪಂಡಿತ್ ಮತ್ತು ಅನೂಪ್ ಭಂಡಾರಿ ಅಭಿನಯಿಸಲಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿತ್ತು. ಆಗ ರಾಧಿಕಾ ಹಾಜರಿರಲಿಲ್ಲ.
ಇದೀಗ ಚಿತ್ರತಂಡದ ಜತೆಗೂಡಿರುವ ರಾಧಿಕಾ ನಿನ್ನೆಯಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಚಿತ್ರದ ಲುಕ್ ಒಂದನ್ನು ರಾಧಿಕಾ ಅಭಿಮಾನಿಗಳಿಗಾಗಿ ಪ್ರಕಟಿಸಿದ್ದಾರೆ. ಜತೆಗೆ ನಿಮ್ಮ ವಿಶ್ ನನಗೆ ಬೇಕಾಗಿದೆ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Sat, 23 Dec 2017 (11:29 IST)
Updated Date: Sat, 23 Dec 2017 (11:32 IST)