ಬೆಂಗಳೂರು: ಮುಂಬೈನ ಐಟಂ ಗರ್ಲ್ ಶರಣ್ಯಾ ಎಂಬಾಕೆ ಸ್ಯಾಂಡಲ್ ವುಡ್ ಡೈರೆಕ್ಟರ್ ಮೆಲ್ವಿನ್ ವಿರುದ್ಧ ಫೇಸ್ ಬುಕ್ ನಲ್ಲಿ ಗಂಭೀರವಾಗಿ ಆರೋಪ ಮಾಡಿದ ಪೋಸ್ಟ್ ವೊಂದನ್ನು ಹಾಕಿದ್ದಾರೆ.
ಸ್ಯಾಂಡಲ್ ವುಡ್ ನಿರ್ದೇಶಕ ಮೆಲ್ವಿನ್ ಎಂಬುವವರ ‘ಹುತ್ತ’ ಸಿನಿಮಾದಲ್ಲಿನ ಡಾನ್ಸ್ ಗಾಗಿ ಶರಣ್ಯಾ ಅವರನ್ನು ಮುಂಬೈಯಿಂದ ಕರೆಸಲಾಗಿತ್ತು. ‘ಡೈರೆಕ್ಟರ್ ಸಿನಿಮಾ ಬಗ್ಗೆ ಮಾತನಾಡುವುದಕ್ಕಿದೆ ಎಂದು ಕರೆಯುತ್ತಾರೆ, ಸಿನಿಮಾ ಬಿಟ್ಟು ಬೇರೆಲ್ಲಾ ಮಾತನಾಡುತ್ತಾರೆ, ಅಸಭ್ಯವಾಗಿ ವರ್ತಿಸುತ್ತಾರೆ' ಎಂದೆಲ್ಲಾ ಶರಣ್ಯಾ ಆರೋಪಿಸಿದ್ದಾರೆ.
ಇವೆಲ್ಲಾ ಸುಳ್ಳು ಎಂದು ಡೈರೆಕ್ಟರ್ ಮೆಲ್ವಿನ್, ಶರಣ್ಯಾ ಆರೋಪವನ್ನು ತಳ್ಳಿ ಹಾಕಿದ್ದಾರೆ. 'ಡಾನ್ಸ್ ಗೆಂದು ಬೆಂಗಳೂರಿಗೆ ಬಂದ ಶರಣ್ಯಾಗೆ ಜ್ವರ ಬಂದಿತ್ತು. ಹಾಗಾಗಿ ಅವರು ಸಿನಿಮಾದಲ್ಲಿ ಡಾನ್ಸ್ ಮಾಡಿಲ್ಲ. ಬೇರೊಬ್ಬ ಐಟಂ ಗರ್ಲ್ ಅನ್ನು ಹಾಕಿಕೊಂಡು ಡಾ ನ್ಸ್ ಮಾಡಿಸಬೇಕಾಯಿತು. ಮುಂಬೈಯಿಂದ ಕರೆಸಿಕೊಂಡಿದ್ದಕ್ಕೆ ನಾವೇ 3 ಸಾವಿರ ಖರ್ಚು ಮಾಡಿ ವಾಪಸ್ ಕಳುಹಿಸಿದ್ದೇವೆ. ಶರಣ್ಯಾ 15 ಸಾವಿರ ಹಣ ನೀಡಿ ಎಂದು ಪೀಡಿಸುತ್ತಿದ್ದರು. ಡಾನ್ಸ್ ಮಾಡದೇ ಹಣ ಹೇಗೆ ನೀಡುವುದಕ್ಕೆ ಆಗುತ್ತದೆ ಎಂದು ಕೇಳಿದ್ದಕ್ಕೆ ಆಕ್ರೋಶಗೊಂಡು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಮೆಲ್ವಿನ್ ಹೇಳುತ್ತಿದ್ದಾರೆ.
ಜಯನಗರದ ಠಾಣೆಯಲ್ಲಿ ನಿರ್ದೇಶಕ ಮೆಲ್ವಿನ್ ವಿರುದ್ಧ ದೂರು ದಾಖಲಿಸಿದ್ದಾರೆ.