Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ 10 ಕೆಜಿಎಫ್ ಗೆ ಸಮ ಎಂದು ಈ ಮೊದಲು ತೆಲುಗು ನಿರ್ದೇಶಕ ಬುಚಿ ಬಾಬು ಹೊಗಳಿದ್ದರು. ಆದರೆ ಈಗ ರಿಲೀಸ್ ಆದ ಮೇಲೆ ಪುಷ್ಪ ಇದೇ ಕಾರಣಕ್ಕೆ ಟ್ರೋಲ್ ಆಗುತ್ತಿದೆ.
ಪುಷ್ಪ ಸಿನಿಮಾವನ್ನು ಕೆಜಿಎಫ್ ಗಿಂತಲೂ ಚೆನ್ನಾಗಿದೆ ಎಂದವರಿಗೆ ಸಿನಿಮಾ ನೋಡಿ ಬಂದ ಕನ್ನಡಿಗರು ಟಾಂಗ್ ಕೊಡುತ್ತಿದ್ದಾರೆ. ಚಿತ್ರಕ್ಕೆ ಇದ್ದ ಬಿಲ್ಡಪ್ ನಷ್ಟು ಸಿನಿಮಾ ಚೆನ್ನಾಗಿಲ್ಲ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಕೆಜಿಎಫ್ ಎಂದರೆ ಬ್ರ್ಯಾಂಡ್. ಅದರ ಅರ್ಧದಷ್ಟೂ ಪುಷ್ಪ ಇಲ್ಲ. ಸುಮ್ಮನೇ ಕೆಜಿಎಫ್ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ ಎಂದು ಪ್ರೇಕ್ಷಕರು ಟಾಂಗ್ ಕೊಡುತ್ತಿದ್ದಾರೆ.