Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕ್ರಾಂತಿ ತಂಡಕ್ಕೆ ಮತ್ತೊಬ್ಬ ಖ್ಯಾತ ನಟನ ಸೇರ್ಪಡೆಯಾಗಿದ್ದಾರೆ.
ಕ್ರಾಂತಿ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ. ಹೀಗಾಗಿ ಬೇರೆ ಭಾಷೆಯ ನಟರೂ ಚಿತ್ರತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಇದೀಗ ಬಹುಭಾಷಾ ನಟ ಸಂಪತ್ ರಾಜ್ ಚಿತ್ರ ತಂಡ ಕೂಡಿಕೊಂಡಿದ್ದಾರೆ. ಖಡಕ್ ವಿಲನ್ ಪಾತ್ರಗಳಲ್ಲೇ ಮಿಂಚುವ ಅವರು ಈ ಸಿನಿಮಾದಲ್ಲಿ ಯಾವ ಪಾತ್ರ ಮಾಡಲಿದ್ದಾರೆ ಎಂಬುದು ಸಸ್ಪೆನ್ಸ್ ಆಗಿದೆ. ಈಗಾಗಲೇ ಹೈದರಾಬಾದ್ ನಲ್ಲಿ ಶೂಟಿಂಗ್ ಆರಂಭವಾಗಿದೆ.