Publish Date: Sun, 06 Jun 2021 (09:13 IST)
Updated Date: Sun, 06 Jun 2021 (09:15 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ನೆರವಿಗೆ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ.
ಕೊರೋನಾದಿಂದಾಗಿ ಶೂಟಿಂಗ್ ಇಲ್ಲದೇ ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ ಧನ ಸಹಾಯ ನೀಡಲು ಪುನೀತ್ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ.ಗಳ ನೆರವು ನೀಡಿದ್ದಾರೆ. ಇದು ಕಾರ್ಮಿಕರ ಖಾತೆಗೆ ಧನ ಸಹಾಯ ಮಾಡಲು ನೆರವಾಗಲಿದೆ.
ಈಗಾಗಲೇ ರಾಕಿಂಗ್ ಸ್ಟಾರ್ ಯಶ್, ರಿಯಲ್ ಸ್ಟಾರ್ ಉಪೇಂದ್ರ ಕಾರ್ಮಿಕರು, ಕಲಾವಿದರಿಗೆ ನೆರವಾಗುತ್ತಿದ್ದಾರೆ. ಇದೀಗ ಪುನೀತ್ ರಾಜಕುಮಾರ್ ಸರದಿ.