Publish Date: Sat, 02 May 2020 (09:08 IST)
Updated Date: Sat, 02 May 2020 (09:09 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಎಷ್ಟೋ ಮಂದಿ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವಾಗ ಅವರಿಗೆ ಸೆಲೆಬ್ರಿಟಿಗಳು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇದೀಗ ತಮ್ಮ ಪ್ರಜಾಕೀಯ ಪಕ್ಷದ ವತಿಯಿಂದ ನಟಿ ಪ್ರಿಯಾಂಕ ಉಪೇಂದ್ರ ಮತ್ತು ಕುಟುಂಬಸ್ಥರೂ ದಿನಸಿ ಹಂಚಿದ್ದಾರೆ.
ಉಪೇಂದ್ರ ಕುಟುಂಬಸ್ಥರಿಂದ ಬಡವರಿಗೆ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹಂಚಿಕೊಂಡಿರುವ ಪ್ರಿಯಾಂಕ ಉಪೇಂದ್ರ ನೀವೂ ನಿಮ್ಮ ಕೈಲಾದಷ್ಟು ಬಡವರಿಗೆ ನೆರವಾಗಿ ಎಂದು ಕರೆ ನೀಡಿದ್ದಾರೆ.