Publish Date: Sat, 02 May 2020 (08:59 IST)
Updated Date: Sat, 02 May 2020 (09:00 IST)
ಬೆಂಗಳೂರು: ಲಾಕ್ ಡೌನ್ ಯಾವಾಗ ಮುಗಿಯುತ್ತದೋ ಎಂದು ಜನ ಕಾಯುವಂತಾಗಿದೆ. ಯಾಕೆಂದರೆ ಲಾಕ್ ಡೌನ್ ಮುಗಿದ ಬಳಿಕ ನೋಡಲು ಸಿನಿಮಾಗಳು ಹನುಮಂತನ ಬಾಲದ ಹಾಗೆ ಸರದಿಯಲ್ಲಿ ಕಾದು ಕುಳಿತಿವೆ.
ಹೆಚ್ಚಿನ ಸ್ಟಾರ್ ನಟರ ಸಿನಿಮಾಗಳು ಬೇಸಿಗೆ ರಜಾ ಅವಧಿಯಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಕೊರೋನಾದಿಂದಾಗಿ ಯೋಜನೆಗಳೆಲ್ಲಾ ತಲೆಕೆಳಗಾಗಿದ್ದವು. ಹೀಗಾಗಿ ಸ್ಯಾಂಡಲ್ ವುಡ್ ನ ಬಹುತೇಕ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’, ಕಿಚ್ಚ ಸುದೀಪ್ ‘ಕೋಟಿಗೊಬ್ಬ’, ದರ್ಶನ್ ಅಭಿನಯದ ‘ರಾಬರ್ಟ್’, ಧ್ರುವ ಸರ್ಜಾ ಅಭಿನಯದ ‘ಭರಾಟೆ’ ಹೀಗೆ ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗಾಗಿ ಕಾದು ಕುಳಿತಿವೆ. ಹೀಗಾಗಿ ಲಾಕ್ ಡೌನ್ ತೆರವಾಗಿ ಚಿತ್ರರಂಗ ತೆರೆದ ತಕ್ಷಣ ಸಿನಿಮಾಗಳ ಜಾತ್ರೆ ಶುರುವಾಗಲಿದೆ.