ಡಬ್ಲಿನ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಐರ್ಲೆಂಡ್ನ ಡಬ್ಲಿನ್ನ ಹಚ್ಚ ಹಸಿರಿನ ಪರಿಸರದಲ್ಲಿ ಪತಿ ನಿಕ್ ಜೋನಾಸ್ ಹಾಗೂ ಮುದ್ದಿನ ಮಗಳು ಮಾಲ್ತಿ ಮೇರಿ ಜತೆ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ತನ್ನ ಮುಂಬರುವ ಆಕ್ಷನ್-ಕಾಮಿಡಿ ಸಿನಿಮಾ 'ಹೆಡ್ಸ್ ಆಫ್ ಸ್ಟೇಟ್' ಚಿತ್ರೀಕರಣದ ಮುಕ್ತಾಯದ ನಂತರ ಪ್ರಿಯಾಂಕ ಅವರು ಪತಿ ಹಾಗೂ ಮಗಳ ಜತೆ ಸಮಯವನ್ನು ಕಳೆಯುತ್ತಿದ್ದಾರೆ.
ಹಂಚಿಕೊಂಡ ಫೋಟೋದಲ್ಲಿ ಪ್ರಿಯಾಂಕಾ ಹಾಗೂ ನಿಕ್ ಜೋನಾಸ್ ಅವರು ಮಗಳ ತುಂಟಾವನ್ನು ನೋಡಿ ಖುಷಿಪಟ್ಟಿದ್ದಾರೆ.
ಫೋಟೋದಲ್ಲಿ, ಪ್ರಿಯಾಂಕಾ ಮಾಲ್ತಿಯನ್ನು ಎತ್ತಿಕೊಂಡಿದ್ದು, ಮಗು, ಕ್ಯಾಪ್ ಧರಿಸಿ, ತಮಾಷೆಯ ವರ್ತನೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಪೋಸ್ಟ್ನಲ್ಲಿ ಪ್ರಿಯಾಂಕಾ ಅವರಯ "ನನ್ನ ದೇವತೆಗಳು.. @ಮಲ್ಟಿಮರಿ @ನಿಕ್ಜೋನಾಸ್," ಎಂದು ಬರೆದುಕೊಂಡಿದ್ದಾರೆ.