ಮುಂಬೈ: ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ತಮ್ಮ ಮಗಳು ಮಾಲ್ತಿ ಮೇರಿ ಜತೆಗೆ ಭಾರತದಲ್ಲಿ ಅದ್ಭುತ ಸಮಯವನ್ನು ಕಳೆದು ಇಂದು ಅಮೇರಿಕಾಗೆ ವಾಪಾಸ್ಸಾದರು.
ಇನ್ನೂ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ಜೋರಾಗಿ ಕೂಗಿದಾಗ ನಿಕ್ ಜೋನಾಸ್ ಸುಮ್ಮನಿರುವಂತೆ ಹೇಳಿದರು. ಮಗಳು ಮಲ್ತಿ ಮಲಗಿದ್ದು ಡಿಸ್ಟಾರ್ಬ್ ಮಾಡ್ಬೇಡಿ ಎಂದು ಸನ್ನೆ ಕೊಟ್ಟರು.
ಪ್ರಿಯಾಂಕ ಮಗಳನ್ನು ತೋಳಿನಲ್ಲಿ ಹಿಡಿದು ಸಾಗಿದರು. ನಿಕ್ ಮಗಳ ಆಟಿಕೆಗಳನ್ನು ಕೈಯಲ್ಲಿ ಹಿಡಿದು ಜತೆ ನಡೆದರು. ಟ್ರೆಂಡಿ ಸನ್ಗ್ಲಾಸ್ನೊಂದಿಗೆ ಸಂಪೂರ್ಣ ಬಿಳಿ ಕೋ-ಆರ್ಡ್ ಉಡುಪಿನಲ್ಲಿ 'ಫ್ಯಾಶನ್' ತಾರೆ ಸಲೀಸಾಗಿ ಸ್ಟೈಲಿಶ್ ಆಗಿ ಕಾಣುತ್ತಿದ್ದರು. ನಿಕ್ ಅವರು ಕಪ್ಪು ಟಿ-ಶರ್ಟ್, ಹಸಿರು ಪ್ಯಾಂಟ್ ಮತ್ತು ಬಿಳಿ ಬೂಟುಗಳನ್ನು ಧರಿಸಿ ಸಾಧಾರಣವಾಗಿ ಧರಿಸಿದ್ದರು.
ಇತ್ತೀಚೆಗೆ, ಪ್ರಿಯಾಂಕಾ ಮತ್ತು ನಿಕ್ ತಮ್ಮ ಮಗಳ ಜತೆ ಸಹೋದರಿ ಮನ್ನಾರಾ ಚೋಪ್ರಾ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡರು.