Select Your Language

Notifications

webdunia
webdunia
webdunia
webdunia

ಸಲಾರ್ ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಹೊಸ ಮುಖ ಪರಿಚಯಿಸಲಿದ್ದಾರಂತೆ ಪ್ರಶಾಂತ್ ನೀಲ್

ಹೈದರಾಬಾದ್
ಹೈದರಾಬಾದ್ : ಟಾಲಿವುಡ್ ಸ್ಟಾರ್ ನಟ  ಪ್ರಭಾಸ್ ಅವರು  ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರ ಜೊತೆ ‘ಸಲಾರ್’ ಚಿತ್ರವನ್ನು ಮಾಡಲು ಸಿದ್ದರಾಗಿದ್ದಾರೆ. ಈ ಚಿತ್ರ ಘೋಷಣೆಯಾದಾಗಿನಿಂದಲೂ ಪ್ರಭಾಸ್ ಜೊತೆ ಜೋಡಿಯಾಗಲಿರುವ ನಾಯಕಿ ಯಾರು ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

ಸಲಾರ್ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕಾಗಿ ನಿರ್ದೇಶಕರು ಹಲವು ನಟಿಯರ ಜೊತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.  ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹಿಂದೆ ವರದಿಯಾಗಿತ್ತು. ಬಳಿಕ ಸಾಯಿ ಪಲ್ಲವಿ  ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿರಲಿಲ್ಲ.

ಹಾಗಾಗಿ ಇತ್ತೀಚಿನ ಮಾಹಿತಿ ಪ್ರಕಾರ  ನಿರ್ದೇಶಕ ಪ್ರಶಾಂತ್ ಅವರು ಈ ಚಿತ್ರದಲ್ಲಿ ಹೊಸ ಮುಖವನ್ನು ಪರಿಚಯಿಸಲು ನಿರ್ಧಾರ ಮಾಡಿದ್ದಾರಂತೆ. ಆಡಿಷನ್ ಈಗಾಗಲೇ ನಡೆಸಲಾಗುತ್ತಿದ್ದು, ಪಾತ್ರವರ್ಗವನ್ನು ಆಯ್ಕೆ ಮಾಡಲಾಗಿದೆ. ಸಲಾರ್ ಚಿತ್ರದ ಶೂಟಿಂಗ್ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎನ್ನಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಸೋಶಿಯಲ್ ಮೀಡಿಯಾದಲ್ಲಿ ಜೂನಿಯರ್ ಎನ್ ಟಿಆರ್ ಕುರಿತಾದ ಈ ಸುದ್ದಿ ಕೇಳಿ ಅಭಿಮಾನಿ ಮಾಡಿದ್ದೇನು?