ಹೈದರಾಬಾದ್ : ಟಾಲಿವುಡ್ ಸ್ಟಾರ್ ಹೀರೋ ಜೂನಿಯರ್ ಎನ್ ಟಿಆರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಕರಾತ್ಮಕ ಸುದ್ದಿಗಳು ಹರಿದಾಡುತ್ತಿದೆ.
ಸೋಶಿಯಲ್ ಮೀಡಿಯಾನಲ್ಲಿ ರಿಂಗ್ ರಸ್ತೆಯಲ್ಲಿ ಜೂನಿಯರ್ ಎನ್ ಟಿಆರ್ ವೇಗವಾಗಿ ಕಾರನ್ನು ಓಡಿಸಿದ್ದಕ್ಕಾಗಿ ಸಂಚಾರ ಪೊಲೀಸರು 1000 ರೂ.ಗಳ ದಂಡ ವಿಧಿಸಿದ್ದಾರೆ ಎಂಬ ಪೋಸ್ಟ್ ಹರಿದಾಡುತ್ತಿದೆ. ದಂಡದ ಪ್ರತಿಯನ್ನು ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿದ್ದಾರೆ.
ಇದನ್ನು ನೋಡಿದ ಅಭಿಮಾನಿಯೊಬ್ಬರು ತಕ್ಷಣ ಹೈದರಾಬಾದ್ ಟ್ರಾಫಿಕ್ ಪೊಲೀಸ್ ವೆಬ್ ಸೈಟ್ ಗೆ ಹೋಗಿ ದಂಡ ಪಾವತಿಸಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ ಅದು ಜೂನಿಯರ್ ಎನ್ ಟಿಆರ್ ಅಲ್ಲ ಎಂದು ಹಲವರು ಹೇಳುತ್ತಿದ್ದಾರೆ.