Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ನಿನ್ನೆ ರಾಜ್ಯೋತ್ಸವ ಪ್ರಯುಕ್ತ ಬಹುಭಾಷಾ ನಟ ಪ್ರಕಾಶ್ ರಾಜ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಐದು ಆಂಬ್ಯುಲೆನ್ಸ್ ಒದಗಿಸಿಕೊಟ್ಟಿದ್ದಾರೆ.
ಅಪ್ಪು ಹೆಸರಿನಲ್ಲಿ ಈಗಾಗಲೇ ಪ್ರಕಾಶ್ ತಮ್ಮ ಫೌಂಡೇಶನ್ ವತಿಯಿಂದ ರಾಜ್ಯದ್ಯಾಂತ ಉಚಿತ ಆಂಬ್ಯುಲೆನ್ಸ್ ಒದಗಿಸುತ್ತಿದ್ದಾರೆ. ಇದಕ್ಕೆ ನಟ ಯಶ್, ಸೂರ್ಯ ಸೇರಿದಂತೆ ಅವರ ಸಿನಿ ಸ್ನೇಹಿತರೂ ಕೈ ಜೋಡಿಸಿದ್ದಾರೆ.
ಇದೀಗ ಮತ್ತೆ ಐದು ಆಂಬ್ಯುಲೆನ್ಸ್ ಗಳನ್ನು ಪ್ರಕಾಶ್ ರಾಜ್ ನೀಡಿದ್ದಾರೆ. ಈ ಸೇವೆಗೆ ಅವರು ಅಪ್ಪು ಎಕ್ಸ್ ಪ್ರೆಸ್ ಎಂದು ಹೆಸರಿಟ್ಟಿದ್ದಾರೆ.