Select Your Language

Notifications

webdunia
webdunia
webdunia
webdunia

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ದಿನ ಬಹಿರಂಗ

ಅರ್ಜುನ್ ಸರ್ಜಾ
ಚೆನ್ನೈ: ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಹಾಗೂ ತಮಿಳು ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ನಿಶ್ಚಿತಾರ್ಥ ಇತ್ತೀಚೆಗೆ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿತ್ತು.

ಚೆನ್ನೈನಲ್ಲಿ ಐಶ್ವರ್ಯಾ-ಉಮಾಪತಿ ಉಂಗುರ ಬದಲಾಯಿಸಿಕೊಂಡಿದ್ದರು. ಆದರೆ ಮದುವೆ ದಿನ ಯಾವಾಗ ಎಂದು ಬಹಿರಂಗವಾಗಿರಲಿಲ್ಲ. ಆದರೆ ಈಗ ಮದುವೆ ದಿನಾಂಕ ಗೊತ್ತಾಗಿದೆ.

ಮುಂದಿನ ವರ್ಷ ಮಾರ್ಚ್ ನಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದುಬಂದಿದೆ. ಚೆನ್ನೈನಲ್ಲೇ ವಿವಾಹ ಕಾರ್ಯಕ್ರಮವೂ ನೆರವೇರುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕ್ ಲೈನ್ ವೆಂಕಟೇಶ್ ಸಹೋದರ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ ದರೋಡೆ!