Publish Date: Sat, 03 Sep 2022 (08:50 IST)
Updated Date: Sat, 03 Sep 2022 (09:03 IST)
ಹೈದರಾಬಾದ್: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮದುವೆ, ಲವ್ ಲೈಫ್ ಬಗ್ಗೆ ಆಗಾಗ ರೂಮರ್ ಗಳು ಹರಡುತ್ತಲೇ ಇರುತ್ತವೆ.
ಇದೀಗ ಪ್ರಭಾಸ್ ಹೆಸರು ಬಾಲಿವುಡ್ ನಟಿಯೊಬ್ಬರ ಜೊತೆ ಕೇಳಿಬಂದಿದೆ. ಪ್ರಭಾಸ್ ಬಾಲಿವುಡ್ ನಟಿ, ಆದಿಪುರುಷ್ ಚಿತ್ರದ ನಾಯಕಿ ಕೃತಿ ಸಾನ್ಸನ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದ ಕೃತಿ ಕಾರ್ಯಕ್ರಮದ ನಡುವೆ ಪ್ರಭಾಸ್ ಗೆ ಕರೆ ಮಾಡುತ್ತಾರೆ. ಈ ವೇಳೆ ಪ್ರಭಾಸ್ ಮತ್ತು ಕೃತಿ ನಡುವಿನ ಸಂಭಾಷಣೆಯಲ್ಲಿರುವ ಆತ್ಮೀಯತೆ ನೋಡಿ ಇಬ್ಬರಿಗೂ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಮೊದಲು ಬಾಹುಬಲಿ ಸಿನಿಮಾ ಸಂದರ್ಭದಲ್ಲಿ ಪ್ರಭಾಸ್ ಹೆಸರು ಅನುಷ್ಕಾ ಶೆಟ್ಟಿ ಜೊತೆ ಕೇಳಿಬಂದಿತ್ತು. ಇಬ್ಬರೂ ಮದುವೆಯಾಗಬೇಕೆಂದು ಅಭಿಮಾನಿಗಳೂ ಬಯಸಿದ್ದರು.