ಚೆನ್ನೈ: ತಮಿಳು ನಟಿ ಮತ್ತು ನಿರೂಪಕಿ ಮಹಾಲಕ್ಷ್ಮಿ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ವಿವಾಹವಾಗಿದ್ದಾರೆ.
ತಮ್ಮ ಮದುವೆ ಕ್ಷಣಗಳನ್ನು ಮಹಾಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ದಡೂತಿ ದೇಹದ ರವೀಂದರ್ ಮತ್ತು ಮಹಾಲಕ್ಷ್ಮಿ ಜೋಡಿಯನ್ನು ನೋಡಿ ನೆಟ್ಟಿಗರು ಇದು ನಿಜ ಮದುವೆಯಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಬ್ಬರಿಗೂ ಇದುವೆ ಎರಡನೇ ಮದುವೆ. ರವೀಂದರ್ ನಿರ್ಮಾಣದ ಸಿನಿಮಾವೊಂದರಲ್ಲಿ ಮಹಾಲಕ್ಷ್ಮಿ ನಟಿಸಿದ್ದರು. ಆಗಿಂದಲೂ ಇಬ್ಬರ ನಡುವೆ ಸ್ನೇಹವಿತ್ತು ಎನ್ನಲಾಗಿದೆ. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.