Publish Date: Fri, 02 Oct 2020 (18:28 IST)
Updated Date: Fri, 02 Oct 2020 (18:30 IST)
ಬಾಲಿವುಡ್ ನಟ, ನಟಿಯರೊಂದಿಗೆ ನಿರ್ಮಾಪಕ ಕರಣ್ ಜೋಹರ್ ನಡೆಸಿರುವ ಪಾರ್ಟಿ ವಿಡಿಯೋ ಇದೀಗ ಅವರಿಗೆ ಮುಳುವಾಗುವ ಸಾಧ್ಯತೆಯಿದೆ.
ವಿಡಿಯೋ ಹಾಗೂ ಪಾರ್ಟಿ ಹಿಂದಿರುವ ಸತ್ಯಾಸತ್ಯತೆ ಅರಿಯಲು ನಿರ್ಮಾಪಕ ಕರಣ್ ಜೋಹರ್ ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಿಚಾರಣೆಗೆ ನಟರನ್ನು ಕರೆಸಿಕೊಳ್ಳಬಹುದು ಎನ್ನಲಾಗಿದೆ.
ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ 2019 ರ ಪಾರ್ಟಿ ವಿಡಿಯೋಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪ್ರತಿಕ್ರಿಯಿಸಿದೆ. ಈ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಅರ್ಜುನ್ ಕಪೂರ್, ವರುಣ್ ಧವನ್, ಮಲೈಕಾ ಅರೋರಾ, ಶಾಹಿದ್ ಕಪೂರ್, ವಿಕ್ಕಿ ಕೌಶಲ್, ಜೊಯಾ ಅಖ್ತರ್ ಮತ್ತು ಇತರರು ಭಾಗವಹಿಸಿದ್ದರು.
ಪಾರ್ಟಿಯ ವಿಡಿಯೋವನ್ನು ಎನ್‌ಸಿಬಿ ಮರುಪರಿಶೀಲಿಸುತ್ತದೆ ಎಂದು ಹೇಳಲಾಗುತ್ತಿದೆ.
ಮಾಜಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಮಾದಕವಸ್ತು ನಿಯಂತ್ರಣ ಬ್ಯೂರೋಗೆ ವಿಡಿಯೋ ಸಂಬಂಧ ದೂರು ನೀಡಿದ್ದು, 2019 ರಲ್ಲಿ ಕರಣ್ ಆಯೋಜಿಸಿದ್ದ ‘ಡ್ರಗ್ ಪಾರ್ಟಿ’ ಕುರಿತು ತನಿಖೆ ಆರಂಭಿಸುವಂತೆ ಮನವಿ ಮಾಡಿದ್ದರು.