ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಸಮಯದಲ್ಲಿ ನಟ, ನಟಿಯರು ಡ್ರಗ್ಸ್ ಮಾಫಿಯಾದಲ್ಲಿರೋ ಆರೋಪ ಕೇಳಿಬಂದಿದೆ.
ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಡ್ರಗ್ಸ್ ಚಾಟ್ ಗ್ರುಪ್ ನ ಅಡ್ಮಿನ್ ಆಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಸೆ. 26 ರಂದು ಎನ್ ಸಿ ಬಿ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.
ಈ ನಡುವೆ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರ ಸಹಾಯಕ ಕ್ಷಿತಿಜ್ ರವಿ ಪ್ರಸಾದ್ ಅವರನ್ನು ಅವರ ವರ್ಸೋವಾ ನಿವಾಸದಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಡ್ರಗ್ಸ್ ಖರೀದಿಸಿದ್ದಾರೆಂದು ಹೇಳಲಾಗಿದ್ದು, ಕ್ಷಿತಿಜ್ ಇದ್ದ ಸ್ಥಳದಲ್ಲಿ ಕೆಲವು ನಿಷಿದ್ಧ ವಸ್ತುಗಳು ಪತ್ತೆಯಾಗಿವೆ.
ಇನ್ನೊಬ್ಬ ವ್ಯಕ್ತಿ ಅನುಭವ್ ಚೋಪ್ರಾ ಎಂಬುವರ ಮೇಲೆಯೂ ಎನ್ಸಿಬಿ ಕಣ್ಣಿಟ್ಟಿದೆ.