Publish Date: Mon, 18 Apr 2022 (07:47 IST)
Updated Date: Mon, 18 Apr 2022 (07:52 IST)
ಹೈದರಾಬಾದ್: ಸಮಂತಾ ಋತು ಪ್ರಭು ಅವರ ಜೊತೆಗಿನ ದಾಂಪತ್ಯ ಜೀವನ ಮುರಿದುಕೊಂಡ ಬೆನ್ನಲ್ಲೇ ನಟ ನಾಗಚೈತನ್ಯ ಮರು ಮದುವೆಗೆ ಸಿದ್ಧರಾಗಿದ್ದಾರೆ.
ಮಜಿಲಿ ಎನ್ನುವ ಸಿನಿಮಾದಲ್ಲಿ ಸಮಂತಾ ಜೊತೆಗೆ ನಾಗಚೈತನ್ಯಗೆ ನಾಯಕಿಯಾಗಿ ದಿವ್ಯಾಂಶ್ ಕೌಶಿಕ್ ಎಂಬ ನಟಿ ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ಈ ನಟಿಯ ಜೊತೆ ನಾಗ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸದ್ಯದಲ್ಲೇ ಈಕೆಯ ಜೊತೆ ನಾಗ ಮದುವೆಯಾಗಲಿದ್ದಾರೆ. ಇದಕ್ಕೆ ಕುಟುಂಬದವರ ಒಪ್ಪಿಗೆಯೂ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.