Publish Date: Thu, 14 Apr 2022 (09:20 IST)
Updated Date: Thu, 14 Apr 2022 (09:20 IST)
ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ಬೀಸ್ಟ್ ಸಿನಿಮಾ ನಿನ್ನೆ ಬಿಡುಗಡೆಯಾಗಿತ್ತು. ಮೊದಲ ದಿನವೇ ಚಿತ್ರ ಮಾಡಿದ ಗಳಿಕೆಯೆಷ್ಟು ಗೊತ್ತಾ?
ಬೀಸ್ಟ್ ಸಿನಿಮಾ ಬಗ್ಗೆ ಕೆಲವು ಟೀಕೆಗಳು ಕೇಳಿಬಂದರೂ ಮೊದಲ ದಿನದ ಗಳಿಕೆಗೆ ಯಾವುದೇ ಪೆಟ್ಟು ಬಿದ್ದಿಲ್ಲ. ಮೊದಲ ದಿನವೇ ಚಿತ್ರ 34 ರಿಂದ 36 ಕೋಟಿ ರೂ. ಗಳಿಕೆ ಮಾಡಿ ತಮಿಳುನಾಡಿನಲ್ಲಿ ದಾಖಲೆ ಬರೆದಿದೆ ಎನ್ನಲಾಗಿದೆ.
ಈ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಲ್ಲೂ ಸೇರಿದಂತೆ ಒಟ್ಟಾರೆ 40 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ.