Publish Date: Sunday, 21 August 2022 (06:40 IST)
Updated Date: Sunday, 21 August 2022 (07:25 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಇಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಶುಕ್ರವಾರದಿಂದಲೇ ಮನೋರಂಜನ್ ಮತ್ತು ಸಂಗೀತಾ ಅವರ ವಿವಾಹ ಶಾಸ್ತ್ರಗಳು ಆರಂಭವಾಗಿದೆ. ಇಂದು ಅರಮನೆ ಮೈದಾನದಲ್ಲಿ ಮದುವೆ ಶಾಸ್ತ್ರಗಳು ನಡೆಯಲಿವೆ.
ಮದುವೆಗೆ ಸ್ಯಾಂಡಲ್ ವುಡ್ ಕಲಾವಿದರು ಆಗಮಿಸುವ ನಿರೀಕ್ಷೆಯಿದೆ. ಈಗಷ್ಟೇ ಸಿನಿಮಾಗೆ ಕಾಲಿಟ್ಟಿರುವ ಮನೋರಂಜನ್ ಈಗ ಕುಟುಂಬಸ್ಥರೇ ನೋಡಿ ತೀರ್ಮಾನಿಸಿರುವ ಹುಡುಗಿಯನ್ನೇ ಬಾಳಸಂಗಾತಿಯಾಗಿ ಬರಮಾಡಿಕೊಳ್ಳುತ್ತಿದ್ದಾರೆ.