Publish Date: Sat, 20 Aug 2022 (17:07 IST)
Updated Date: Sat, 20 Aug 2022 (17:09 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪ್ರಭುದೇವ ಜೊತೆಯಾಗಿ ಹೆಜ್ಜೆ ಹಾಕಿರುವ ಲಕ್ಕಿಮ್ಯಾನ್ ಹಾಡಿನ ವಿಡಿಯೋ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.
ಇದು, ಪವರ್ ಸ್ಟಾರ್ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಆಗಸ್ಟ್ 23 ರಂದು ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿರುವ ಹಾಡಿನ ವಿಡಿಯೋ ಲಾಂಚ್ ಆಗುತ್ತಿದೆ.
ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಸಿನಿಮಾದಲ್ಲಿ ಪುನೀತ್-ಪ್ರಭುದೇವ ಹಾಡೊಂದಕ್ಕೆಜೊತೆಯಾಗಿ ಹೆಜ್ಜೆ ಹಾಕಿದ್ದರು. ಡ್ಯಾನ್ಸ್ ವಿಚಾರದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಮೀರಿಸುತ್ತಾರೆ. ಹೀಗಿರುವಾಗ ಅಪ್ಪು ಫ್ಯಾನ್ಸ್ ಗೆ ಇದು ನಿಜಕ್ಕೂ ಟ್ರೀಟ್ ಆಗಲಿದೆ.