ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಇತ್ತಿಚೆಗೆ ಸಿನಿಮಾ ನಟ-ನಟಿಯರನ್ನು ಟ್ರೋಲ್ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈಗ ಇಲ್ಲೊಬ್ಬ ಭೂಪ ಸಿನಿಮಾ ನಟಿಯೊಬ್ಬರಿಗೆ ಟ್ವೀಟರ್ ಮೂಲಕ ಮದುವೆಯಾಗುವುದಾಗಿ ಪ್ರಪೋಜ್ ಮಾಡಿದ್ದಾನೆ.
ನಟಿ ರಾಯ್ ಲಕ್ಷ್ಮೀ ಅವರಿಗೆ ಅವರ ಅಭಿಮಾನಿಯೊಬ್ಬ ಟ್ವೀಟರ್ ನಲ್ಲಿ 'ನನಗೆ ಐದು ಎಕರೆ ಹೊಲವಿದೆ. ಸ್ಕೂಟರ್ ಇದೆ. ನೀನು ಅಂದ್ರೆ ನನಗೆ ತುಂಬಾ ಇಷ್ಟ. ನಿನ್ನನ್ನು ಮದುವೆಯಾಗಬೇಕೆಂಬ ಆಸೆ ಇದೆ' ಎಂದು ಲಕ್ಷ್ಮಿ ಅವರಿಗೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಉತ್ತರಿಸಿದ ನಟಿ ಲಕ್ಷ್ಮೀ, 'ನಿಮ್ಮ ಪ್ರಪೋಸಲ್‌ಗೆ ತುಂಬಾ ಥ್ಯಾಂಕ್ಸ್. ಆದರೆ ನನಗೆ ಈಗ ಮದುವೆಯಾಗುವ ಯೋಚನೆ ಇಲ್ಲ. ನಿಮ್ಮ ಲೈಫಿನೊಳಕ್ಕೆ ಸುಂದರವಾದ ಹುಡುಗಿ ಬರಬೇಕು ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.
ಮತ್ತೆ ಇದಕ್ಕೆ ಪ್ರತಿಯಾಗಿ ಇನ್ನೊಂದು ಟ್ವೀಟ್ ಮಾಡಿದ್ದ ಅಭಿಮಾನಿ, 'ನನ್ನ ತಾಯಿ ಹಾಗೂ ನಿಮ್ಮ ತಾಯಿ ಹೆಸರು ಒಂದೇ ಆಗಿದೆ. ಹಾಗಾಗಿ ನಿಮ್ಮನ್ನು ಮದುವೆಯಾಗಬೇಕು ಎಂದು ಭಾವಿಸಿದ್ದೆ’ ಎಂದು ಹೇಳಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ