ನ್ಯೂಯಾರ್ಕ್: ಯಾಕೋ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೆಲ್ಲಾಟದ ಕತೆಗಳಿಗೆ ಕೊನೆಯೇ ಇಲ್ಲವೇನೋ. ಹಿಂದೊಮ್ಮೆ ಪ್ಲೇಬಾಯ್ ಮಾಡೆಲ್ ಒಬ್ಬಳು ಟ್ರಂಪ್ ಜತೆಗೆ ಪಲ್ಲಂಗದ ಕತೆ ಹಂಚಿಕೊಂಡಿದ್ದಳು. ಇದೀಗ ಮತ್ತೊಬ್ಬ ಮಾಡೆಲ್ ಅಮೆರಿಕಾ ಅಧ್ಯಕ್ಷರ ಸೆಕ್ಸ್ ಕರ್ಮ ಕಾಂಡ ಬಿಚ್ಚಿಟ್ಟಿದ್ದಾಳೆ.
ಡೊನಾಲ್ಡ್ ಟ್ರಂಪ್ ನನ್ನೊಂದಿಗೆ ಸೆಕ್ಸ್ ಮಾಡಿದ್ದರು ಎಂದು 47 ವರ್ಷದ ಕರೆನ್ ಮೆಕ್ ಡಾಲ್ ಎಂಬಾಕೆ ಹೇಳಿಕೊಂಡಿದ್ದಾಳೆ. ಹಿಂದೊಮ್ಮೆ ಟ್ರಂಪ್ ಜತೆಗೆ ನಡೆಸಿದ ಸರಸದ ಬಗ್ಗೆ ಹೇಳಿಕೊಂಡ ಆಕೆ ಬಳಿಕ ಟ್ರಂಪ್ ಹೇಳಿದ ಮಾತೊಂದನ್ನು ಬಹಿರಂಗಪಡಿಸಿದ್ದು, ಮತ್ತಷ್ಟು ಬೆಚ್ಚಿಬೀಳಿಸುವಂತಿದೆ.
ನನ್ನ ಜತೆ ಸೆಕ್ಸ್ ನಡೆಸಿದ ಬಳಿಕ ಟ್ರಂಪ್ ನೀನು ನನ್ನ ಮಗಳಷ್ಟೇ ಚೆಂದದ ಚೆಂದುಳ್ಳಿ ಚೆಲುವೆ ಎಂದಿದ್ದರು ಎಂದು ಕರೆನ್ ಹೇಳಿಕೊಂಡಿದ್ದಾರೆ. ಟ್ರಂಪ್ ತಮ್ಮ ಮಗಳು ಇವಾಂಕಾ ಬಗ್ಗೆ ಹೆಮ್ಮೆ ಪಡಬೇಕು ನಿಜ. ಆದರೆ ಅವರು ತಾನು ಸರಸವಾಡಿದ ಮಹಿಳೆ ಜತೆಗೆ ತನ್ನನ್ನು ಹೋಲಿಸಿದ್ದು ಅಚ್ಚರಿಯುಂಟು ಮಾಡಿತ್ತು ಎಂದು ಕರೆನ್ ಹೇಳಿಕೊಂಡಿದ್ದಾರೆ. ಈ ಸುದ್ದಿ ಇದೀಗ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ