Webdunia - Bharat's app for daily news and videos

Install App

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕೆ ಎಲ್‌ ರಾಹುಲ್, ಆಥೀಯಾ ಶೆಟ್ಟಿ

Sampriya
ಸೋಮವಾರ, 1 ಏಪ್ರಿಲ್ 2024 (15:13 IST)
Photo Courtesy X
ಮುಂಬೈ: ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದೆ. ಈ ಬಗ್ಗೆ ಸ್ಟಾರ್ ಜೋಡಿ ಯಾವುದೇ ವಿಚಾರವನ್ನು ಖಚಿತಪಡಿಸಿಲ್ಲ.

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಜನವರಿ 2023 ರಲ್ಲಿ ವಿವಾಹವಾದರು. ನಟ ಸುನೀಲ್ ಶೆಟ್ಟಿ ಕೊಟ್ಟ ಸುಳಿವಿನಿಂದಾಗಿ ಈ ಸುದ್ದಿ ಹರಿದಾಡುತ್ತಿದೆ. ಹೌದು ನಟ ಸುನೀಲ್ ಕುಮಾರ್ ಅವರು,  ಮಾಧುರಿ ದೀಕ್ಷಿತ್ ಅವರೊಂದಿಗೆ ಡಾನ್ಸ್ ದೀವಾನೆ ಕಾರ್ಯಕ್ರಮದ ಜಡ್ಜ್‌ ಆಗಿದ್ದಾರೆ.

ಡ್ಯಾನ್ಸ್ ರಿಯಾಲಿಟಿ ಶೋನ ಇತ್ತೀಚಿನ ಸಂಚಿಕೆಯಲ್ಲಿ, ಸುನೀಲ್ ಅವರು 'ನಾನಾ (ಅಜ್ಜ)' ಆಗುವ ಬಗ್ಗೆ ಮಾತನಾಡಿದರು.

ಸುನೀಲ್ ಶೆಟ್ಟಿ ಹೇಳಿದ್ದೇನು: ರಿಯಾಲಿಟಿ ಶೋನ ನಿರೂಪಕಿ ಭಾರತಿ ಸಿಂಗ್ ಅವರು ಯಾವ ರೀತಿಯ 'ನಾನಾ' ಎಂದು ಸುನೀಲ್ ಶೆಟ್ಟಿ ಅವರನ್ನು ಕೇಳಿದಾಗ "ಹೌದು, ಮುಂದಿನ ಸೀಸನ್ ಬಂದಾಗ (ಡ್ಯಾನ್ಸ್ ದೀವಾನೆಯಲ್ಲಿ), ನಾನು ನಾನಾ ರೀತಿಯಲ್ಲಿ ವೇದಿಕೆಯ ಮೇಲೆ ನಡೆಯುತ್ತೇನೆ. " ಎಂದಿದ್ದರು.

ಈ ಹೇಳಿಕೆಯಿಂದಾಗಿ ರಾಹುಲ್ ಹಾಗೂ ಆಥೀಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಅಥಿಯಾ ಮತ್ತು ಕೆಎಲ್ ರಾಹುಲ್ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಜನವರಿಯಲ್ಲಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ಅವರು ತಮ್ಮ ವೈವಾಹಿಕ ಜೀವನದ ಕೆಲವು ರೋಮ್ಯಾಂಟಿಕ್ ಕ್ಷಣಗಳ ತುಣುಕನ್ನು ಹಂಚಿಕೊಂಡಿದ್ದರು.

ದಂಪತಿಗಳು ಜನವರಿ 23, 2023 ರಂದು ಅವರ ತಂದೆ ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು; ಮದುವೆಯಲ್ಲಿ ಆಪ್ತರು ಮತ್ತು ಕುಟುಂಬದವರು ಭಾಗವಹಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

ಮುಂದಿನ ಸುದ್ದಿ
Show comments