Webdunia - Bharat's app for daily news and videos

Install App

ನನ್ನ ತಂದೆಗೆ ಅಷ್ಟೂ ಅರ್ಹತೆಯಿರ್ಲಿಲ್ವಾ: ಅಜ್ಜಿ ಸಾವಿನ ಬಳಿಕ ಕಿಚ್ಚ ಸುದೀಪ್ ಮಗಳ ಆಕ್ರೋಶ

Krishnaveni K
ಸೋಮವಾರ, 21 ಅಕ್ಟೋಬರ್ 2024 (14:39 IST)
ಬೆಂಗಳೂರು: ಅಜ್ಜಿ ಸರೋಜ ಸಂಜೀವ್ ಸಾವಿನ ಬಳಿಕ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶದಿಂದಲೇ ಸಂದೇಶವೊಂದನ್ನು ಬರೆದಿದ್ದಾರೆ. ನನ್ನ ತಂದೆಗೆ ಅಷ್ಟೂ ಅರ್ಹತೆಯಿರಲಿಲ್ವಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಿಚ್ಚ ಸುದೀಪ್ ತಾಯಿ ಕಳೆದುಕೊಂಡ ದುಃಖದಲ್ಲಿದ್ದಾಗ ಅವರ ಮನೆ ಮುಂದೆ ಸಾಕಷ್ಟು ಜನ ಜಮಾಯಿಸಿದ್ದರು. ಕೆಲವರು ನಿಜವಾಗಿಯೂ ಸಂತಾಪ ವ್ಯಕ್ತಪಡಿಸುವ ಉದ್ದೇಶದಿಂದ ಬಂದರೆ ಮತ್ತೆ ಕೆಲವರು ಅಲ್ಲಿಯೂ ತಮ್ಮ ಸ್ಟಾರ್ ಗಳನ್ನು ನೋಡಬಹುದು ಎಂಬ ಉದ್ದೇಶದಿಂದಲೇ ಬಂದರು.

ಅದರಲ್ಲೂ ಸುದೀಪ್ ತಮ್ಮ ತಾಯಿಯ ಅಂತಿಮ ಯಾತ್ರೆಗಾಗಿ ಒಬ್ಬ ಮಗನಾಗಿ ಕೈಯಲ್ಲಿ ಮಡಕೆ ಹಿಡಿದು ಬಂದರೆ ಅವರನ್ನು ನೋಡಲೆಂದು ಸಾಕಷ್ಟು ಜನ ನೂಕು ನುಗ್ಗಲು ನಡೆಸಿದ್ದರು. ಇದು ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಸುದೀಪ್ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಪಕ್ಕಕ್ಕೆ ಹೋಗಿ ಎಂದು ಕಿರುಚಿದರು.

ಕೆಲವರು ಸುದೀಪ್ ರನ್ನು ಅಕ್ಷರಶಃ ತಳ್ಳುತ್ತಿದ್ದರು. ತನ್ನ ಅಮ್ಮನಿಗೆ ವಿದಾಯ ಹೇಳಲೂ ಬಿಡಲಿಲ್ಲ. ಇದು ಸಾನ್ವಿ ಸುದೀಪ್ ಸಿಟ್ಟಿಗೆ ಕಾರಣವಾಗಿದೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು ನನ್ನ ತಂದೆಗೆ ತನ್ನ ಅಮ್ಮನನ್ನು ಶಾಂತಿಯುತವಾಗಿ ಕಳುಹಿಸಿಕೊಡುವ ಅರ್ಹತೆಯೂ ಇರಲಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನನ್ನ ಅಜ್ಜಿಯನ್ನು ಕಳೆದುಕೊಂಡಿರುವುದಕ್ಕಿಂತಲೂ ನಮ್ಮ ಮನೆಯ ಮುಂದೆ ಜಮಾಯಿಸಿದ್ದ ಕೆಲವರು ಕಿರುಚಾಡುತ್ತಿದ್ದುದು, ಘೋಷಣೆ ಕೂಗುತ್ತಿದ್ದುದು, ಕ್ಯಾಮರಾಗಳನ್ನು ನಮ್ಮ ದುಃಖತಪ್ತ ಮುಖಗಳಿಗೆ ಫೋಕಸ್ ಮಾಡಲೆತ್ನಿಸುತ್ತಿದ್ದು ಎಲ್ಲಕ್ಕಿಂತ ಕೆಟ್ಟ ಅನುಭವವಾಗಿತ್ತು. ಇದಕ್ಕಿಂತಲೂ ಅಮಾನವೀಯವಾಗಿ ನಡೆದುಕೊಳ್ಳಲು ಸಾಧ್ಯವೇ ಎನಿಸಿತು. ನನ್ನ ತಂದೆ ಅವರ ತಾಯಿಗಾಗಿ ಅಳುತ್ತಿದ್ದರೆ, ಆಕೆಯನ್ನು ಶಾಂತಿಯುತವಾಗಿ ಕಳುಹಿಸಿಕೊಡಲು ಪ್ರಯತ್ನಿಸುತ್ತಿದ್ದರೆ ಅವರನ್ನು ತಳ್ಳುತ್ತಿದ್ದರು. ನಾನು ನನ್ನ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿದ್ದರೆ ಈ ಜನರು ಎಷ್ಟು ಒಳ್ಳೆಯ ರೀಲ್ಸ್ ಮಾಡಬಹುದು ಎಂದು ತಳ್ಳಾಡುತ್ತಿದ್ದರು’ ಎಂದು ಸಾನ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

ಮುಂದಿನ ಸುದ್ದಿ
Show comments