Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.
ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಸಿನಿಮಾ ಈಗ ವಿವಿಧ ಭಾಷೆಗಳಿಗೂ ಡಬ್ ಆಗಿ 25 ದಿನವನ್ನು ಯಶಸ್ವಿಯಾಗಿ ಪೂರ್ತಿ ಮಾಡಿದೆ.
ಹಿಂದಿಯಲ್ಲಿ ಸಿನಿಮಾ 50 ಕೋಟಿ ಗಳಿಕೆ ದಾಟಿ ಮುನ್ನುಗ್ಗುತ್ತಿದೆ. ತೆಲುಗಿನಲ್ಲಿ 13 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಇನ್ನು ಒಟ್ಟಾರೆಯಾಗಿ ಎಲ್ಲಾ ಭಾಷೆಗಳನ್ನೂ ಸೇರಿ 200 ಕೋಟಿ ರೂ. ಗಳಿಕೆ ಮಾಡಿ ಚಿತ್ರ ಬ್ಲಾಕ್ ಬ್ಲಸ್ಟರ್ ಎಂದು ನಿರೂಪಿಸಿದೆ.
-Edited by Rajesh Patil