Publish Date: Fri, 23 Oct 2020 (10:51 IST)
Updated Date: Fri, 23 Oct 2020 (10:53 IST)
ಬೆಂಗಳೂರು: ರಾಬರ್ಟ್ ಸಿನಿಮಾದಲ್ಲಿ ಖಳ ನಟನ ಪಾತ್ರ ಮಾಡುತ್ತಿರುವ ತೆಲುಗು ಸ್ಟಾರ್ ನಟ ಜಗಪತಿ ಬಾಬು ಮೊದಲ ಬಾರಿಗೆ ಕನ್ನಡದಲ್ಲೇ ಡಬ್ಬಿಂಗ್ ಮಾಡಿದ್ದಾರೆ.
ರಾಬರ್ಟ್ ಸಿನಿಮಾದಲ್ಲಿ ತಮ್ಮ ಪಾಲಿನ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಇದರೊಂದಿಗೆ ಮೊದಲ ಬಾರಿಗೆ ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಿ ದಾಖಲೆಯನ್ನೂ ಮಾಡಿದ್ದಾರೆ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ಇದಲ್ಲದೆ, ಮದಗಜ ಸಿನಿಮಾದಲ್ಲೂ ಜಗಪತಿ ಬಾಬು ಖಳನಾಗಿ ಮಿಂಚಲಿದ್ದಾರೆ.