ಬೆಂಗಳೂರು: ಕೊರೋನಾ ಕಾರಣದಿಂದ ಹಲವು ಸ್ಟಾರ್ ನಟರು ಈ ವರ್ಷ ತಮ್ಮ ಬರ್ತ್ ಡೇ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಇದೇ ಹಾದಿಯಲ್ಲಿ ನಡೆದಿದ್ದಾರೆ.
ಕೊವಿಡ್ 19 ಕಾರಣದಿಂದ ಈ ವರ್ಷ ನನ್ನ ಹುಟ್ಟುಹಬ್ಬವನ್ನು ನೇರವಾಗಿ ನಿಮ್ಮನ್ನು ಭೇಟಿ ಮಾಡಿ ಆಚರಿಸಲಾಗುತ್ತಿಲ್ಲ. ಕ್ಷಮೆಯಿರಲಿ. ನಿಮ್ಮ ಪ್ರೀತಿ, ಶುಭಾಷಯ ಸದಾ ನನ್ನ ಜತೆಯಿರಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕೊರೋನಾದಿಂದಾಗಿ ಹಲವರು ಬಡವರಾಗಿದ್ದಾರೆ. ಬದುಕಿನ ಶೈಲಿಯೇ ಬದಲಾಗಿದೆ. ಇಂತಹ ಸಂದರ್ಭದಲ್ಲಿ ವೈಭವದ ಬರ್ತ್ ಡೇ ಆಚರಣೆ ಬೇಡ ಎಂಬುದು ನನ್ನ ಭಾವನೆ ಎಂದು ಅಭಿಮಾನಿಗಳಿಗೆ ಗಣೇಶ್ ಮನವಿ ಮಾಡಿದ್ದಾರೆ.