ಬೆಂಗಳೂರು: ಕೊರೋನಾವೈರಸ್ ಇಡೀ ಜಗತ್ತನ್ನೇ ಕಂಗೆಡಿಸುತ್ತಿದೆ. ಮಾರಕ ರೋಗ ಹರಡದಂತೆ ಒಂದು ವಾರ ಕಾಲ ಕರ್ನಾಟಕ ಅಕ್ಷರಶಃ ಬಂದ್ ಆಗಿದೆ. ಆದರೆ ಕೊರೋನಾಗೆ ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್ 12 ವರ್ಷದ ಹಿಂದೆಯೇ ರಜೆ ಘೋಷಿಸಿದ್ದರು!
ಹೇಗೆ ಅಂತೀರಾ? ಸ್ವತಃ ಗಣೇಶ್ ತಮಾಷೆಯಾಗಿ ಇದನ್ನು ಹೇಳಿಕೊಂಡಿದ್ದಾರೆ. 2008 ರಲ್ಲಿ ಬಿಡುಗಡೆಯಾಗಿದ್ದ ಯೋಗರಾಜ್ ಭಟ್-ಗಣಿ ಅಭಿನಯದ ‘ಗಾಳಿಪಟ’ ಸಿನಿಮಾದಲ್ಲಿ ಟೀಚರ್ ಆಗಿರುವ ನಾಯಕಿ ಕೆಮ್ಮಿದಾಗ ನಾಯಕ ಗಣೇಶ್ ‘ಟೀಚರ್ ಕೆಮ್ತಾವವ್ರೆ. ಒಂದು ವಾರ ಸ್ಕೂಲ್ ಗೆ ರಜಾ’ ಅಂತ ಎಲ್ಲರನ್ನೂ ಮನೆಗೆ ಕಳುಹಿಸುತ್ತಾರೆ.
ಈ ದೃಶ್ಯದ ವಿಡಿಯೋ ಪ್ರಕಟಿಸಿರುವ ಗಣೇಶ್ ‘ಕೊರೋನಾಗೆ ಒಂದು ವಾರ ರಜಾ ಕೊಟ್ಟಿದ್ದರ ನಿಜ ಕಾರಣ. ಎಲ್ಲಾ ಕೊರೋನಾ ಮಹಿಮೆ’ ಎಂದು ತಮಾಷೆ ಮಾಡಿದ್ದಾರೆ.