ಚೆನ್ನೈ: ವಿಶ್ವವೇ ಕೊರೋನಾವೈರಸ್ ಭೀತಿಯಲ್ಲಿದ್ದರೆ, ಚೆನ್ನೈನಲ್ಲಿ ಸ್ಥಳೀಯ ಅಧಿಕಾರಿಗಳು ಇದನ್ನು ನಿಭಾಯಿಸಲು ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಕ್ರಿಕೆಟಿಗ ಆರ್ ಅಶ್ವಿನ್ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತದಲ್ಲಿ ಇದುವರೆಗೆ 110 ಕೊರೋನಾವೈರಸ್ ಸೋಂಕಿತರ ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿರುವ ವರದಿಯಾಗಿದೆ. ಈ ನಡುವೆ ದೇಶದ ಹಲವೆಡೆ ಇದಕ್ಕೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಚೆನ್ನೈನಲ್ಲಿ ಮಾತ್ರ ಅಧಿಕಾರಿಗಳು ಇನ್ನೂ ಜಾಗೃತರಾಗಿಲ್ಲ ಎಂದು ಅಶ್ವಿನ್ ಕಿಡಿ ಕಾರಿದ್ದಾರೆ.
‘ಚೆನ್ನೈ ವಾಸಿಗಳಿಗೆ ಇನ್ನೂ ಇದರ ಗಂಭೀರತೆ ಅರಿವಾದಂತಿಲ್ಲ. ಬಿಸಿಲು ಜಾಸ್ತಿಯಾದಂತೆ ಕೊರೋನಾ ಪರಿಣಾಮ ಕಡಿಮೆಯಾಗುತ್ತದೆ ಎಂಬ ತಪ್ಪು ನಂಬಿಕೆಯಲ್ಲಿರುವಂತಿದೆ. ಆದರೆ ಇದು ನಂಬಿಕೆಯಷ್ಟೇ. ಇದು ನಿಜವಲ್ಲ ಎಂದು ಅರಿತುಕೊಳ್ಳಬೇಕು’ ಎಂದು ಅಶ್ವಿನ್ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.