Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡಾ.ರಾಜ್ ಕುಮಾರ್ ಬರ್ತ್ ಡೇ: ಅಣ್ಣಾವ್ರಿಗೆ ಎಷ್ಟೆಲ್ಲಾ ಬಿರುದುಗಳಿತ್ತು ಹೇಳಿ ನೋಡೋಣ

Dr Rajkumar

Krishnaveni K

ಬೆಂಗಳೂರು , ಬುಧವಾರ, 24 ಏಪ್ರಿಲ್ 2024 (08:21 IST)
ಬೆಂಗಳೂರು: ಕನ್ನಡದ ಕಣ್ಮಣಿ ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಡಾ.ರಾಜ್ ಕುಮಾರ್ ಜನ್ಮದಿನವಿಂದು. ಇಂದು ಅಣ್ಣಾವ್ರು ಬದುಕಿದ್ದರೆ ಅವರಿಗೆ 95 ವರ್ಷವಾಗಿರುತ್ತಿತ್ತು.

ಡಾ.ರಾಜ್ ಕುಮಾರ್ ಎಂದರೆ ಅವರು ಕೇವಲ ವ್ಯಕ್ತಿಯಲ್ಲ. ಕನ್ನಡಿಗರ ಪಾಲಿಗೆ ಒಂದು ಭಾವನಾತ್ಮಕ ಅಂಶ. ಕನ್ನಡಿಗರು ಅವರನ್ನು ನಿಜ ಜೀವನದಲ್ಲೂ ಆದರ್ಶವಾಗಿಯೇ ನೋಡುತ್ತಾರೆ. ಅದಕ್ಕೆ ಅವರು ಬದುಕಿದ್ದ ರೀತಿಯೇ ಕಾರಣ. ಹೀಗಾಗಿ ಅಭಿಮಾನಿಗಳು ಅವರಿಗೆ ಪ್ರೀತಿಯಿಂದ ಅನೇಕ ಹೆಸರಿಟ್ಟಿದ್ದರು.

ತೆರೆಯ ಮೇಲಿನ ಅದ್ಭುತ ಅಭಿನಯಕ್ಕಾಗಿ ಅವರಿಗೆ ಸರ್ಕಾರದಿಂದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಬಿರುದುಗಳು ಸಂದಾಯವಾಗಿದೆ. ಆದರೆ ಅವೆಲ್ಲಕ್ಕಿಂತಲೂ ಅವರು ದೇವರು ಎಂದೇ ಪರಿಗಣಿಸುತ್ತಿದ್ದ ಅಭಿಮಾನಿಗಳು ಅವರಿಗೆ ಪ್ರೀತಿಯಿಂದ ನಾನಾ ಹೆಸರಿಟ್ಟಿದ್ದರು. ಅವುಗಳಲ್ಲಿ ಕೆಲವು ಇಲ್ಲಿದೆ ನೋಡಿ.

ಅಭಿಮಾನಿಗಳು ಪ್ರೀತಿಯಿಂದ ಅವರನ್ನು ಅಣ್ಣಾವ್ರು ಎಂದೇ ಕರೆಯುತ್ತಿದ್ದರು. ಇದಲ್ಲದೆ, ವರನಟ, ನಟ ಸಾರ್ವಭೌಮ, ರಸಿಕರರಾಜ, ಬಂಗಾರದ ಮನುಷ್ಯ, ಕನ್ನಡ ಕಂಠೀರವ, ಗಾನ ಗಂಧರ್ವ, ರಾಜಣ್ಣ, ಅಪ್ಪಾಜಿ ಎಂಬಿತ್ಯಾದಿ ಪ್ರೀತಿಯ ಹೆಸರುಗಳಿಂದ ಕರೆಯುತ್ತಿದ್ದರು. ಅವರೂ ತಮ್ಮ ಅಭಿಮಾನಿಗಳನ್ನು ಅಷ್ಟೇ ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ಅಭಿಮಾನಿ ದೇವರುಗಳೇ ಎಂದೇ ಕರೆಯುತ್ತಿದ್ದರು. ತಮಗೆ ಅನ್ನ ನೀಡುವ ನಿರ್ಮಾಪಕರನ್ನು ಅನ್ನದಾತರು ಎಂದೇ ಕರೆಯುತ್ತಿದ್ದರು. ಆಕ್ಷನ್ ಕಟ್ ಹೇಳುತ್ತಿದ್ದ ನಿರ್ದೇಶಕರನ್ನು ಗುರುಸಮಾನರಾಗಿ ನೋಡುತ್ತಿದ್ದರು. ತಮಗೆ ಸಿಕ್ಕ ಸ್ಟಾರ್ ಪಟ್ಟಕ್ಕೆ ಸ್ವಲ್ಪವೂ ಅಹಂಕಾರ ಪಡದೇ ಸರಳವಾಗಿ ಜೀವನ ಮಾಡಿ ಎಲ್ಲರ ಪಾಲಿಗೆ ಆದರ್ಶಪ್ರಾಯರಾಗಿದ್ದವರು. ಇಂತಿಪ್ಪ ಅಣ್ಣಾವ್ರಿಗೆ ನಮ್ಮ ಕಡೆಯಿಂದಲೂ ಒಂದು ಹ್ಯಾಪೀ ಬರ್ತ್ ಡೇ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಆಗಮನದ ಖುಷಿಯ ಬೆನ್ನಲ್ಲೇ ಮತ್ತೊಂದು ಸಂಭ್ರಮ ಹಂಚಿಕೊಂಡ ಅದಿತಿ ಪ್ರಭುದೇವ