ಬೆಂಗಳೂರು: ಮನೆ ಮಗಳು ಧನ್ಯಾ ಮೊದಲ ಬಾರಿಗೆ ಅಭಿನಯಿಸಿರುವ ನಿನ್ನ ಸನಿಹಕೆ ಸಿನಿಮಾ ಇದೇ ಅಕ್ಟೋಬರ್ 8 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಸಿನಿಮಾ ಯಶಸ್ವಿಗೊಳಿಸಲು ಈಗ ಡಾ. ರಾಜ್ ಕುಟುಂಬ ಜೊತೆಯಾಗಿದೆ.
ಅಕ್ಟೋಬರ್ 7 ರಂದು ಚಿತ್ರದ ಪ್ರೀಮಿಯರ್ ಶೋ ನಡೆಯಲಿದ್ದು, ಈ ಶೋನಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘಣ್ಣ ಸೇರಿದಂತೆ ಇಡೀ ರಾಜ್ ಕುಟುಂಬವೇ ಹಾಜರಿರಲಿದೆ ಎನ್ನಲಾಗಿದೆ.
ಸೂರಜ್-ಧನ್ಯಾ ಅಭಿನಯದ ರೊಮ್ಯಾಂಟಿಕ್ ಸಿನಿಮಾ ನೋಡಲು ಈಗಾಗಲೇ ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.