Publish Date: Tue, 05 Oct 2021 (08:46 IST)
Updated Date: Tue, 05 Oct 2021 (09:20 IST)
ದುಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ 3 ವಿಕೆಟ್ ಗಳ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಗ್ರ ಸ್ಥಾನದೊಂದಿಗೆ ಪ್ಲೇ ಆಫ್ ಹಂತಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ಅಂಬಟಿ ರಾಯುಡು ಅಜೇಯ 55 ರನ್ ಗಳಿಸಿದರು. ಧೋನಿ ಮತ್ತೆ ನಿಧಾನಗತಿಯ ಬ್ಯಾಟಿಂಗ್ ಮಾಡಿ 27 ಎಸೆತಗಳಿಂದ 18 ರನ್ ಗಳಿಸಿದರು. ಕಳಪೆ ಫಾರ್ಮ್ ನಲ್ಲಿದ್ದ ಸುರೇಶ್ ರೈನಾ ಬದಲಿಗೆ ರಾಬಿನ್ ಉತ್ತಪ್ಪ ಆಡಿದರೂ 19 ರನ್ ಗಳಿಸಲಷ್ಟೇ ಶಕ್ತರಾದರು.
ಈ ಮೊತ್ತ ಬೆನ್ನತ್ತಿದ ಡೆಲ್ಲಿ ಶಿಖರ್ ಧವನ್-ಹೆಟ್ ಮೇರ್ ಆಟದಿಂದ 19.4 ಓವರ್ ಗಳಿಂದ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಧವನ್ 39 ರನ್, ಶಿರ್ಮಾನ್ ಹೆಟ್ ಮೇರ್ 18 ಎಸೆತಗಳಿಂದ 28 ರನ್ ಗಳಿಸಿದರು.