Select Your Language

Notifications

webdunia
webdunia
webdunia
webdunia

ಡಾಲಿ ಧನಂಜಯ್ ಸಾಧಕರ ಸೀಟ್ ಗೆ ಇಷ್ಟು ಬೇಗ ಬರಬಾರದಿತ್ತಾ?

ಡಾಲಿ ಧನಂಜಯ್ ಸಾಧಕರ ಸೀಟ್ ಗೆ ಇಷ್ಟು ಬೇಗ ಬರಬಾರದಿತ್ತಾ?
ಬೆಂಗಳೂರು , ಶುಕ್ರವಾರ, 14 ಏಪ್ರಿಲ್ 2023 (09:20 IST)
Photo Courtesy: Twitter
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರ ಸಾಧಕರ ಸೀಟ್ ನಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ಕೂರಲಿದ್ದಾರೆ.

ಡಾಲಿ ಧನಂಜಯ್ ಪಾಲ್ಗೊಂಡಿರುವ ಶೋನ ಪ್ರೋಮೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಡಾಲಿ ಧನಂಜಯ್ ಸಾಧಕರ ಸೀಟ್ ನಲ್ಲಿ ಕುಳಿತುಕೊಳ್ಳುತ್ತಾರೆ ಎಂದು ತಿಳಿದ ತಕ್ಷಣ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅವರಲ್ಲಿ ಕೆಲವರು ಡಾಲಿ ಇಷ್ಟು ಬೇಗ ಸಾಧಕರ ಸೀಟ್ ನಲ್ಲಿ ಕೂರಬಾರದಿತ್ತು. ಅವರು ಈಗಷ್ಟೇ ಸಾಧನೆಯ ಹಾದಿಯಲ್ಲಿದ್ದಾರೆ. ಅವರು ಸಾಧಿಸುವುದು ಇನ್ನಷ್ಟಿದೆ. ಕೆಲವು ಸಮಯದ ನಂತರ ಅವರನ್ನು ಕರೆತರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಬಿಡುಗಡೆಗೆ ಒಂದು ವರ್ಷ: ರೆಕಾರ್ಡ್ ಗಳೇನೇನು?