Publish Date: Fri, 07 Apr 2023 (09:20 IST)
Updated Date: Fri, 07 Apr 2023 (09:29 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಭಾಗಿಯಾಗಿದ್ದ ವೀಕೆಂಡ್ ವಿತ್ ರಮೇಶ್ ಸೀಸನ್ 5 ರ ಮೊದಲ ಎಪಿಸೋಡ್ ಸಾಕಷ್ಟು ಟ್ರೋಲ್ ಗೊಳಗಾಗಿತ್ತು.
ರಮ್ಯಾ ಕಾರ್ಯಕ್ರಮದುದ್ದಕ್ಕೂ ಕನ್ನಡಕ್ಕಿಂತ ಇಂಗ್ಲಿಷ್ ಭಾಷೆಯನ್ನೇ ಹೆಚ್ಚು ಬಳಸಿದ್ದರಿಂದ ನೆಟ್ಟಿಗರು ರಮ್ಯಾ ಮತ್ತು ವಾಹಿನಿಯನ್ನು ಟ್ರೋಲ್ ಮಾಡಿದ್ದರು. ಕನ್ನಡ ಭಾಷಾಂತರ ಯಾವಾಗ ಪ್ರಸಾರವಾಗುತ್ತದೆ? ಎಂದು ಪ್ರಶ್ನೆ ಮಾಡಿದ್ದರು.
ಆದರೆ ಇಷ್ಟೆಲ್ಲಾ ಟ್ರೋಲ್ ಆದರೂ ಕಾರ್ಯಕ್ರಮದ ಟಿಆರ್ ಪಿ ಮಾತ್ರ ಉತ್ತಮವಾಗಿಯೇ ಬಂದಿದೆ. ಮೊದಲ ಎಪಿಸೋಡ್ ನ ಟಿವಿ ರೇಟಿಂಗ್ ಪಾಯಿಂಟ್ ನಗರ ಪ್ರದೇಶದಲ್ಲಿ 6.3 ಮತ್ತು ನಗರ ಮತ್ತು ಗ್ರಾಮಾಂತರ ಪ್ರದೇಶ ಒಟ್ಟು ಸೇರಿ 5.8 ರೇಟಿಂಗ್ ಬಂದಿದೆ.