ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಧನರಾಜ್ ಆಚಾರ್ ಅವರ ಕಾಮಿಡಿ ಕಂಟೆಂಟ್ ವಿಡಿಯೋಗಳಿಗೆ ಸಾಕಷ್ಟು ಫಾಲೋವರ್ ಗಳಿದ್ದಾರೆ. ಇದೀಗ ರಸ್ತೆ ಗುಂಡಿಗಳ ಬಗ್ಗೆ ಅವರು ಮಾಡಿರುವ ಕಾಮಿಡಿ ವಿಡಿಯೋವೊಂದು ನಿಮಗೆ ನಕ್ಕು ನಕ್ಕು ಸಾಕಾಯ್ತಪ್ಪಾ ಎನಿಸುವಂತೆ ಮಾಡುತ್ತದೆ.
ಧನರಾಜ್ ತಮ್ಮದೇ ಕುಟುಂಬದವರ ಜೊತೆ ಸೇರಿಕೊಂಡು ಕಂಟೆಂಟ್ ವಿಡಿಯೋ ಮಾಡಿ ಸಾಕಷ್ಟು ಫಾಲೋವರ್ ಗಳನ್ನು ಹೊಂದಿದ್ದಾರೆ. ಅವರ ಒಂದೊಂದು ವಿಡಿಯೋಗೂ ಲಕ್ಷಾಂತರ ವೀಕ್ಷಣೆಯಾಗುತ್ತದೆ. ಅವರದ್ದೇ ಆದ ವೀಕ್ಷಕರ ಬಳಗವನ್ನು ಹೊಂದಿದ್ದಾರೆ.
ಇದೀಗ ರಾಜ್ಯದಲ್ಲಿ ರಸ್ತೆ ಗುಂಡಿಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು ಇಂತಹ ಸಂದರ್ಭದಲ್ಲೇ ರಸ್ತೆ ಗುಂಡಿ ಸರಿಪಡಿಸಿ ಎಂದು ತಮ್ಮದೇ ಶೈಲಿಯಲ್ಲಿ ಕಾಮಿಡಿಯಾಗಿ ಜನಪ್ರತಿನಿಧಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಕೊನೆಯಲ್ಲಿ ರಸ್ತೆ ಗುಂಡಿ ಸರಿಪಡಿಸಲು ಇನ್ನೆಷ್ಟು ಜೀವಗಳು ಹೋಗಬೇಕು? ನಾವು ರಸ್ತೆ ಸರಿಪಡಿಸಲು ಟ್ಯಾಕ್ಸ್ ಕಟ್ಟುತ್ತೇವೆ, ಅಪಘಾತಗಳಿಗಲ್ಲ ಎಂದು ಸಂದೇಶವೊಂದನ್ನು ನೀಡಿದ್ದಾರೆ. ಅವರ ವಿಡಿಯೋ ಇಲ್ಲಿದೆ ನೋಡಿ.