Publish Date: Tue, 02 Apr 2019 (07:48 IST)
Updated Date: Tue, 02 Apr 2019 (07:50 IST)
ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ನಿನ್ನೆ 20 ಕ್ಕೂ ಹೆಚ್ಚು ಕಡೆ ರೋಡ್ ಶೋ ನಡೆಸಿ ಸುಮಲತಾ ಅಮ್ಮನ ಪರ ಮತ ಯಾಚಿಸಿದ ನಟ ದರ್ಶನ್ ಸ್ಥಳೀಯರು ಕೊಟ್ಟ ತಿಂಡಿ-ತಿನಿಸು ತಿಂದು, ಮನೆ ಮಗನಂತೆ ಖುಷಿಪಡಿಸಿದ್ದರು.
ಇಂದು ಮತ್ತೆ ಬೆಳಿಗ್ಗೆ 9.30 ರಿಂದ ಪ್ರಚಾರ ಆರಂಭಿಸಲಿರುವ ದರ್ಶನ್ ಸುಮಾರು 35 ಕ್ಕೂ ಹೆಚ್ಚು ಕಡೆ ಪ್ರಚಾರ ನಡೆಸಲು ತಯಾರಿ ನಡೆಸಿದ್ದಾರೆ. ಇಂದು ರಾಕಿಂಗ್ ಸ್ಟಾರ್ ಯಶ್ ಕೂಡಾ ಪ್ರಚಾರಕ್ಕಿಳಿಯಲಿದ್ದಾರೆ. ಹೀಗಾಗಿ ಇಂದು ಮಂಡ್ಯ ಕಣ ರಂಗೇರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ