ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಕ್ರೇಜಿ ಕ್ವೀನ್ ರಕ್ಷಿತಾ ಅವರು ಇದೀಗ ನಟಿಯೊಬ್ಬರ ಪಾತ್ರಕ್ಕೆ ಧ್ವನಿ ನೀಡುವುದರ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ರಿಎಂಟ್ರಿ ಕೊಟ್ಟಿದ್ದಾರೆ.
ಹೌದು. ನಟಿ ರಕ್ಷಿತಾ ಅವರು ‘ದಿ ವಿಲನ್'’ ಚಿತ್ರದ ನಾಯಕಿಯಾಗಿ ನಟಿಸಿರುವ ಆಯಮಿ ಜಾಕ್ಸನ್ ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದಾರೆ. ರಕ್ಷಿತಾ ತಮ್ಮ ಸಿನಿಮಾಗಳಿಗೆ ತಾವೇ ಡಬ್ ಮಾಡುತ್ತಿದ್ದರು. ಆದರೆ ಅವರ ಧ್ವನಿಯನ್ನು ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇದೀಗ ಅವರ ಧ್ವನಿಯನ್ನು ‘ದಿ ವಿಲನ್'’ ಚಿತ್ರದ ಮೂಲಕ ಮತ್ತೆ ಕೇಳುವ ಅವಕಾಶ ಸಿಕ್ಕಿದೆ.
ಅಷ್ಟಕ್ಕೂ ರಕ್ಷಿತಾ ಅವರಿಂದ ಡಬ್ಬಿಂಗ್ ಮಾಡಿಸಲು ಕಾರಣ ಏನೆಂಬುದನ್ನು ಕೂಡ ‘ದಿ ವಿಲನ್'’ ಚಿತ್ರದ ನಿರ್ದೇಶಕ ಪ್ರೇಮ್ ಅವರು ತಿಳಿಸಿದ್ದು, ಅವರ ಪ್ರಕಾರ ರಕ್ಷಿತಾ ಅವರ ಧ್ವನಿ ಆಯಮಿ ಜಾಕ್ಸನ್ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತದೆಯಂತೆ. ಜೊತೆಗೆ ಇಂಗ್ಲೀಷ್ ಮಿಶ್ರಿತ ಕನ್ನಡ ಮಾತನಾಡುವ ಪಾತ್ರವಾದ್ದರಿಂದ ರಕ್ಷಿತಾ ಅವರಿಂದ ಡಬ್ಬಿಂಗ್ ಮಾಡಿಸಲಾಗಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ