Publish Date: Fri, 05 Apr 2019 (08:57 IST)
Updated Date: Fri, 05 Apr 2019 (08:58 IST)
ಮಂಡ್ಯ: ಪ್ರಚಾರದ ವೇಳೆ ಅಭಿಮಾನಿಗಳು ಸ್ಟಾರ್ ಗಳನ್ನು ನೋಡಿ ಮುತ್ತಿಕೊಳ್ಳುವುದು ಹೊಸದೇನಲ್ಲ. ಅದೇ ರೀತಿ ಅಭಿಮಾನಿಯ ಮಿತಿ ಮೀರಿದ ವರ್ತನೆಯಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಕೈಗೆ ಏಟು ಮಾಡಿಕೊಂಡಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿರುವ ದರ್ಶನ್, ರೋಡ್ ಶೋ ನಡೆಸುವಾಗ ಸಾವಿರಾರು ಅಭಿಮಾನಿಗಳನ್ನು ಅವರನ್ನು ನೋಡಲೆಂದೇ ಆಗಮಿಸುತ್ತಿದ್ದಾರೆ.
ನಿನ್ನೆ ಇದೇ ರೀತಿ ರೋಡ್ ಶೋ ನಡೆಸುವಾಗ ದರ್ಶನ್ ಗೆ ಮುತ್ತಿಕ್ಕಲು ಬಂದ ಅಭಿಮಾನಿಯೊಬ್ಬ ಅವರ ಮೇಲೆ ಆಯತಪ್ಪಿ ಬಿದ್ದಿದ್ದು, ಮೊದಲೇ ಏಟಾಗಿದ್ದ ಕೈಗೆ ಮತ್ತೆ ಏಟಾಗುವಂತೆ ಮಾಡಿದ್ದಾನೆ. ಹೀಗಾಗಿ ದರ್ಶನ್ ಆಸ್ಪತ್ರೆಗೆ ತೆರಳಬೇಕಾಯಿತು. ಈ ಮೊದಲು ಮೈಸೂರಿನಿಂದ ಬರುವಾಗ ದರ್ಶನ್ ಕಾರು ಅಪಘಾತವಾಗಿ ಕೈಗೆ ಏಟಾಗಿತ್ತು. ಆ ಕೈ ಇನ್ನೂ ವಾಸಿಯಾಗಿಲ್ಲ. ಪ್ರಚಾರದ ವೇಳೆಯೂ ಆ ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ದರ್ಶನ್ ಪ್ರಚಾರ ನಡೆಸುತ್ತಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ