Publish Date: Wed, 03 Apr 2019 (16:12 IST)
Updated Date: Wed, 03 Apr 2019 (16:15 IST)
ರಾಜ್ಯದ ಡಿಎಂಕೆ ಘಟಕವು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಚುನಾವಣೆಯಲ್ಲಿ ಸಹಕಾರ ನೀಡಲಿದೆ.
ಕಾಂಗ್ರೆಸ್ ಮುಖಂಡ ಕೆ.ಪ್ರಕಾಶ್ ಹೇಳಿಕೆ ನೀಡಿದ್ದು, ಬೆಂಗಳೂರಿನ ಮೂರು ಕ್ಷೇತ್ರಗಳು, ಚಾಮರಾಜನಗರ, ಶಿವಮೊಗ್ಗ, ಭದ್ರವತಿ, ಕೋಲಾರ, ಚಿಕ್ಕಮಗಳೂರು, ಕೊಡಗು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಡಿಎಂಕೆ ಇದೆ.
ಲೋಕಸಭಾ ಚುನಾವಣಾ ಹಿನ್ನಲೆ ತಮಿಳುನಾಡಿನ ಡಿಎಂಕೆ ಪಕ್ಷಕ್ಕೆ ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷರು, ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರಿಗೆ ಮನವಿ ಮಾಡಿದ್ದರು. ಅದರಂತೆ ರಾಜ್ಯದ ಡಿಎಂಕೆ ಮುಖಂಡರು, ಕಾಂಗ್ರೆಸ್, ಜೆಡಿಎಸ್ ಗೆ ಸಹಕಾರ ನೀಡಲಿದ್ದಾರೆ ಎಂದರು.
ರಾಮಸ್ವಾಮಿ, ಪೆರಿಯಸ್ವಾಮಿ, ದಕ್ಷಿಣಮೂರ್ತಿ, ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗಡೆ ನಾಯುಡು ಉಪಸ್ಥಿತಿ ಇದ್ದರು.
ಐಟಿ ದಾಳಿನಡೆಸುವುದು ಅನ್ಯಾಯ ಎಂದ ಡಿಎಂಕೆ ಮುಖಂಡರು, ಆಂಧ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕದಲ್ಲಿ ಬಿಜೆಪಿ ವಿರೋಧ ಪಕ್ಷಗಳ ನಾಯಕರ ಮೇಲೆ ಐಟಿ ದಾಳಿ ಮಾಡಲಾಗಿದೆ. ಇದನ್ನೆಲ್ಲ ತಡೆಯಲು ಮೊದಲು ಮೋದಿಯನ್ನು ತಡೆಗಟ್ಟಬೇಕು ಎಂದರು. ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಮನೆಮನೆ ಪ್ರಚಾರ ಮಾಡುತ್ತೇವೆ ಎಂದರು ಪೆರಿಯಸ್ವಾಮಿ.