Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟಿಯ ನಗ್ನ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್: ಖ್ಯಾತ ಯೂಟ್ಯೂಬರ್ ವಿರುದ್ಧ ದೂರು

ನಟಿಯ ನಗ್ನ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್: ಖ್ಯಾತ ಯೂಟ್ಯೂಬರ್ ವಿರುದ್ಧ ದೂರು

Sampriya

ಹೈದರಾಬಾದ್ , ಬುಧವಾರ, 25 ಸೆಪ್ಟಂಬರ್ 2024 (19:41 IST)
Photo Courtesy X
ನಟಿಯೊಬ್ಬರು ನೀಡಿದ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.

ತೆಲುಗಿನ ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಪರಿಚಯದ ಯುವತಿ ಲೈಂಗಿಕ ದೌರ್ಜನ್ಯ ಆರೋಪ ಎಸಗಿದಸ್ದಾರೆ. ಅದಲ್ಲದೆ ಎರಡು ಕೋಟಿ ರೂಪಾಯಿ ವಂಚನೆ ಮಾಡಿರುವುದಾಗಿ ದೂರಿನಲ್ಲು ಉಲ್ಲೇಖಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶ್ರೀ ಎಂದೇ ಖ್ಯಾತಿ ಗಳಿಸಿದ್ದಾರೆ.

ಮುಂಬೈನ 25 ವರ್ಷದ ನಟಿ ಈ ಹಿಂದೆ ಹಿಂದೆ ದೂರದರ್ಶನದಲ್ಲಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು ಕಳೆದ ವರ್ಷ ಬಿಡುಗಡೆಯಾದ ಚಲನಚಿತ್ರದಲ್ಲಿ ಹರ್ಷ ಸಾಯಿ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಇಬ್ಬರು ಪರಸ್ಪರ ಸ್ನೇಹಿತರು ಆಯೋಜಿಸಿದ್ದ ಖಾಸಗಿ ಪಾರ್ಟಿಯಲ್ಲಿ ಮೊದಲು ಭೇಟಿಯಾದರು, ಅಲ್ಲಿ ಅವರು ಪರಿಚಯವಾಯಿತು. ಕಾಲಾನಂತರದಲ್ಲಿ, ಅವರ ಸಂಬಂಧವು ಗಾಢವಾಯಿತು, ಹರ್ಷ ಸಾಯಿ ನಟಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದರು. ಮದುವೆಯ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಸಾಯಿ ತನ್ನ ನಗ್ನ ಚಿತ್ರಗಳು ಮತ್ತು ವೀಡಿಯೊಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಇದರಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿರುವ ನಟಿ ಅಂತಿಮವಾಗಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮಗನನ್ನ ಎದೆ ಮೇಲೆ ಮಲಗಿಸಿ ಮುದ್ದಾಡಿದ ನಟ ಚಂದನ್‌ ಕುಮಾರ್‌ಗೆ ಬುದ್ಧಿವಾದ ಹೇಳಿದ ತಾಯಂದಿರು