Publish Date: Thu, 29 Sep 2022 (09:34 IST)
Updated Date: Thu, 29 Sep 2022 (09:36 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಿನ್ನೆಯ ದಿನ ಅಮೂಲ್ಯ ಗೌಡ ಮತ್ತು ರಾಕೇಶ್ ಅಡಿಗ ತಮ್ಮ ಹಳೆಯ ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಅಮೂಲ್ಯ ತಮಗೆ ಕಾಲೇಜು ದಿನಗಳಲ್ಲಿ ಬಾಯ್ ಫ್ರೆಂಡ್ ಇದ್ದ ಎಂದಿದ್ದರು. ಇದೀಗ ಮಾಜಿ ಲವ್ವರ್ ಗಳ ಬಗ್ಗೆ ಅಮೂಲ್ಯ ಮತ್ತು ರಾಕೇಶ್ ಮನಬಿಚ್ಚಿ ಮಾತನಾಡಿದ್ದಾರೆ.
ಲಿವಿಂಗ್ ಏರಿಯಾದಲ್ಲಿ ದೀಪಿಕಾ ಮತ್ತು ಅಮೂಲ್ಯ ಕೂತಿದ್ದಾಗ ಬಳಿ ಬಂದ ರಾಕೇಶ್ ನನಗೆ ಹಲವು ರಿಲೇಷನ್ ಇತ್ತು. ಯಾವುದೂ ಫೈಲ್ಯೂರ್ ಆಗಿಲ್ಲ. ಈಗಲೂ ನನ್ನ ಹಳೇ ಗರ್ಲ್ ಫ್ರೆಂಡ್ಸ್ ಜೊತೆ ಚೆನ್ನಾಗಿಯೇ ಇದ್ದೇನೆ ಎಂದರು.
ಆಗ ಅಮೂಲ್ಯ ನನಗೆ ಹಾಗೆ ಇರಲು ಆಗಲ್ಲ. ಚೆನ್ನಾಗಿರುವಾಗ ನಾನು ಬಾಯ್ ಫ್ರೆಂಡ್ ಜೊತೆ ಚೆನ್ನಾಗಿಯೇ ಇರುತ್ತೇನೆ. ಅವನೇನಾದರೂ ಮೋಸ ಮಾಡ್ತಿದ್ದಾನೆ ಎಂದರೆ ನನಗೆ ಮತ್ತೆ ಅವನ ಜೊತೆ ಚೆನ್ನಾಗಿರಲು ಸಾಧ್ಯವಿಲ್ಲ ಎನ್ನುತ್ತಾರೆ.