Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಯೋಗಾ ಗುರು ಬಾಬಾ ರಾಮದೇವ್ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯೇ ಹೈ ಇಂಡಿಯಾ ಚಿತ್ರಕ್ಕೆ ಪ್ರಚಾರ ನೀಡುವುದರೊಂದಿಗೆ ಸೈಯಾನ್ ಸೈಯಾನ್ ಎನ್ನುವ ಹಾಡಿನಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯೇ ಹೈ ಇಂಡಿಯಾ ಚಿತ್ರದ ಸಾಹಿತ್ಯ ಮತ್ತು ನಿರ್ದೇಶನದ ಹೊಣೆಯನ್ನು ಲೋಮ್ ಹರ್ಷ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಾವೈ ಚಹಾಲ್ ಮತ್ತು ಡಿಯಾನಾ ಉಪ್ಪಲ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
ಕೋಟ್ಯಾಂತರ ಜನಸಂಖ್ಯೆಯನ್ನು ಹೊಂದಿದ ದೇಶ, ವೇದಗಳನ್ನು ಕಂಡುಹಿಡಿದ ದೇಶ; ಈ ದೇಶದ ಬಗ್ಗೆ ವಿಶ್ವದಲ್ಲಿ ಕೆಲವರಿಗೆ ತಪ್ಪು ದೃಷ್ಟಿಕೋನವಿದೆ, ಭಾರತವು ಕೇವಲ ಹಾವಾಡಿಗರ ದೇಶವಲ್ಲ. ಇದು ಮುಂದುವರಿದ ರಾಷ್ಟ್ರವಾಗಿದೆ ಎಂದು ಬಾಬಾ ರಾಮದೇವ್ ತಿರುಗೇಟು ನೀಡಿದ್ದಾರೆ.
"ಇಡೀ ವಿಶ್ವವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ, ಈ ಬದಲಾವಣೆಯನ್ನು 'ಯೇ ಹೈ ಇಂಡಿಯಾ' ಚಿತ್ರದಲ್ಲಿ ಪ್ರದರ್ಶಿಸಲಾಗಿದೆ. ಆದ್ದರಿಂದ ಬಹಳಷ್ಟು ಚಿಂತನೆಯ ನಂತರ ನಾನು ಈ ಚಿತ್ರಕ್ಕೆ ಬಲವಾಗಿ ಬೆಂಬಲ ನೀಡುವ ನಿರ್ಧಾರ ತೆಗೆದುಕೊಂಡಿದ್ದೇನೆ ಭಾರತದ ಪ್ರತಿಯೊಬ್ಬ ನಾಗರಿಕರೂ ಬೆಂಬಲಿಸುತ್ತಾರೆ ಎಂದು ನಿರೀಕ್ಷಿಸುವುದಾಗಿ ಹೇಳಿದ್ದಾರೆ.
"ನನ್ನ ಚಿತ್ರಕ್ಕೆ ಪೂರ್ಣ ಬೆಂಬಲವನ್ನು ನೀಡಿರುವ ಬಾಬಾ ರಾಮದೇವ್‌ಜಿಗೆ ನಾನು ನಿಜವಾಗಿಯೂ ಕೃತಜ್ಞರಾಗಿರುತ್ತೇನೆ, ನಮ್ಮ ಚಿತ್ರಕ್ಕಾಗಿ ನಾವು ಯಾವುದೇ ಉತ್ತಮ ಸಾರ್ವಜನಿಕ ರಾಯಭಾರಿ ದೊರೆತಿರಲಿಲ್ಲ ಎಂದು ಹೇಳಿದರು. ಯೇ ಹೈ ಇಂಡಿಯಾ ಚಿತ್ರ ಆಗಸ್ಟ್ 18 ರಂದು ಬಿಡುಗಡೆಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.