Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಯೋಗ ಗುರು ಬಾಬಾ ರಾಮದೇವ್ ಅವರ ದಂಗಲ್ ಕಥೆ ಇದು. ಯೋಗದ ಶಕ್ತಿ ಏನೆಂದು ತೋರಿಸುತ್ತೇನೆ ಎಂದು ಒಲಿಂಪಿಕ್ ವಿಜೇತ ಕುಸ್ತಿ ಪಟು ಆಂಡ್ರಿ ಸ್ಟಾಡ್ನಿಕ್ ಅವರಿಗೆ ಮಣ್ಣುಮುಕ್ಕಿಸಿದ್ದಾರೆ.
2008 ಇಸವಿಯಲ್ಲಿ ನಡೆದ ಒಲಿಂಪಿಕ್ಸ್ ಸ್ಪರ್ಧೆಯ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಭಾರತದ ಕುಸ್ತಿ ಪಟು ಸುಶೀಲ್ ಕುಮಾರ್ ಅವರನ್ನು ಪರಾಭವಗೊಳಿಸಿದ್ದ ಉಕ್ರೇನ್‌ನ ಕುಸ್ತಿ ಪಟು ಆಂಡ್ರಿ ಸ್ಟಾಡ್ನಿಕ್ ಅವರಿಗೆ ತನ್ನ ಜತೆ ಸೆಣಸಾಡುವಂತೆ ಯೋಗ ಗುರು ಚಾಲೆಂಜ್ ಮಾಡಿದ್ದರು. ಬಾಬಾ ಸವಾಲಿಗೆ ಅಚ್ಚರಿ ವ್ಯಕ್ತ ಪಡಿಸಿದ್ದ ಆಂಡ್ರಿ ಈ ಸವಾಲನ್ನು ಸ್ವೀಕರಿಸಿ ಬಾಬಾ ಜತೆ ನಿನ್ನೆ ಕಣಕ್ಕಿಳಿದಿದ್ದರು.
ಕುಸ್ತಿಗಿಳಿಯುವ ಮೊದಲುಸೂರ್ಯ ನಮಸ್ಕಾರ ಮಾಡಿದ ಬಾಬಾಗೆ ಆಂಡ್ರಿ ಸಾಟಿಯಾಗಲೇ ಇಲ್ಲ. ಆತನನ್ನು ಬಾಬಾ
12-0 ಅಂತರದಲ್ಲಿ ಹೀನಾಯವಾಗಿ ಸೋಲಿಸಿದರು.
ಕೇಸರಿ ಚಡ್ಡಿ, ಕಪ್ಪು ಶೂ ಧರಿಸಿ ಕಣಕ್ಕಿಳಿದಿದ್ದ ಬಾಬಾ ಗೆಲುವಿನ ಬಳಿಕ, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂದು ಕೂಗಿದರು.
ಕುಸ್ತಿಪಟುಗಳಿಗೆ ಬಾಬಾ ರಾಮದೇವ್ ಚಾಲೆಂಜ್ ಮಾಡಿದ್ದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ಹರಿದ್ವಾರದಲ್ಲಿ ತಮ್ಮ ಆಶ್ರಮದ 20ನೇ ವಾರ್ಷಿಕೋತ್ಸವದ ವೇಳೆ ರಾಮದೇವ್ ಅವರು ಸುಶೀಲ್ ಕುಮಾರ್ ಅವರಿಗೆ ಚಾಲೆಂಜ್ ಮಾಡಿದ್ದರು.
ಬಾಬಾ ದಂಗಲ್: ಒಲಿಂಪಿಕ್ ವಿಜೇತನಿಗೆ ಮಣ್ಣು ಮುಕ್ಕಿಸಿದ ರಾಮದೇವ್ (ವಿಡಿಯೋ)
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ